ಮತ್ತೋರ್ವ ಹಿಂದೂ ಗುಂಡೇಟಿಗೆ ಬಲಿ

ಢಾಕಾ: ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಇದೀಗ ಮೈಮೆನ್ ಸಿಂಗ್ ಜಿಲ್ಲೆಯಲ್ಲಿ ಮತ್ತೋರ್ವ ಹಿಂದೂ ಯುವಕನನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಸೋಮವಾರ ಸಾಯಂಕಾಲ 6:45 ರ ಸುಮಾರಿಗೆ ಗಾರ್ಮೆಂಟ್ ಕಾರ್ಖಾನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಬಜೇಂದ್ರ ವಿಶ್ವಾಸ್ (40) ಎಂಬಾತನನ್ನು ಆತನ ಸಹೋದ್ಯೋಗಿ ನೋಮಾನ್ ಮಿಯಾ ಎಂಬಾತ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಮೈಮೆನ್ ಸಿಂಗ್ ಜಿಲ್ಲೆಯ ಸುಲ್ತಾನ್ ಸ್ಟೇಟರ್ಸ್ ಲಿ. ಕಾರ್ಖಾನೆಯಲ್ಲಿ ಇವರಿಬ್ಬರು ಭದ್ರತೆ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದು ಸೋಮವಾರ ಇಬ್ಬರ ನಡುವೆ ಬಾಂಗ್ಲಾದ ಸರ್ಕಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೋಪಗೊಂಡ ಮಿಯಾ ಗುಂಡು ಹಾರಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ. ವಿಶ್ವಾಸ್ ಬಲತೊಡೆಗೆ ಗಾಯವಾಗಿದ್ದು ಆಸ್ಪತ್ರೆಗೆ ಕರೆದೊಯ್ಯುವಾಗಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.





