ವಿಕಾಸ ಜನಸೇವಾ ಕಚೇರಿಯಲ್ಲಿ, ಶಾಸಕರಿಂದ ಅಭಿನಂದನೆ
“ಇನ್ನಷ್ಟು ಸಾಧನೆಗಳ ಮೂಲಕ ರಾಜ್ಯಕ್ಕೆ, ಕಾರ್ಕಳಕ್ಕೆ ಹೆಸರು ತರುವಂತಾಗಲಿ: ಶಾಸಕ ವಿ. ಸುನಿಲ್ ಕುಮಾರ್

ಬಾಂಗ್ಲಾದೇಶದಲ್ಲಿ ನಡೆದ 2ನೇ ಮಹಿಳಾ ಕಬ್ಬಡಿ ವಿಶ್ವಕಪ್- ಪಂದ್ಯಾಟದಲ್ಲಿ ಚಾಂಪಿಯನ್ ಆದ ಭಾರತ ತಂಡವನ್ನು ಪ್ರತಿನಿಧಿಸಿ ವಿಜಯಗಳಿಸಿ ದೇಶಕ್ಕೆ ಹೆಮ್ಮೆ ತಂದ ನಮ್ಮ ನಾಡಿನ ಹೆಮ್ಮೆಯ ಪ್ರತಿಭೆ ಮೂಲತಃ ಕಾರ್ಕಳ ಮಿಯ್ಯಾರು ಗ್ರಾಮದವರಾಗಿದ್ದು ಪ್ರಸ್ತುತ ಸುರತ್ಕಲ್ ಗುಡ್ಡೆಕೊಪ್ಪದ ನಿವಾಸಿಯಾಗಿರುವ ನಾರಾಯಣ ಪೂಜಾರಿ ಮತ್ತು ಶ್ರೀಮತಿ ಶಶಿಕಲಾ ದಂಪತಿಗಳ ಪುತ್ರಿ ಕು. ಧನಲಕ್ಷ್ಮೀ ಯವರನ್ನು ಇಂದು ವಿಕಾಸ ಜನಸೇವಾ ಕಛೇರಿಯಲ್ಲಿ ಬಿಜೆಪಿ ಪ್ರಮುಖರೊಂದಿಗೆ ಮಾನ್ಯ ಶಾಸಕರಾದ ವಿ ಸುನಿಲ್ ಕುಮಾರ್ ರವರು ಅಭಿನಂದಿಸಿ, ಮುಂದೆ ಇನ್ನಷ್ಟು ಸಾಧನೆ ಮಾಡುವ ಮೂಲಕ ಕಾರ್ಕಳಕ್ಕೆ ನಮ್ಮ ರಾಜ್ಯಕ್ಕೆ- ದೇಶಕ್ಕೆ ಹೆಸರು ತರುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಕ್ರಿಯೇಟಿವ್ ವಿದ್ಯಾ ಸಂಸ್ಥೆಯ ಸಹ ಸಂಸ್ಥಾಪಕರಾದ ಗಣನಾಥ್ ಶೆಟ್ಟಿ, ಅಶ್ವಥ್ ಎಸ್ ಎಲ್, ಬಿಜೆಪಿ ಕ್ಷೇತ್ರಾಧ್ಯಕ್ಷರಾದ ನವೀನ್ ನಾಯಕ್, ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಬೋಳ, ಬಿಜೆಪಿ ಹಿರಿಯರಾದ ರವೀಂದ್ರ ಮಡಿವಾಳ, ಯುವ ಮೋರ್ಚಾ ಅಧ್ಯಕ್ಷರಾದ ರಾಕೇಶ್ ಶೆಟ್ಟಿ, ಮಹಿಳಾ ಮೋರ್ಚಾ ಪ್ರಮುಖರು ಹಾಗೂ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಉಪಸ್ಥಿತರಿದ್ದರು.






