20.5 C
Udupi
Sunday, February 15, 2026
spot_img
spot_img
HomeBlogಬಸ್, ಮೆಟ್ರೋ ಬಳಿಕ ಹಾಲು, ಮೊಸರು, ವಿದ್ಯುತ್‌ ದರ ಏರಿಕೆ ಬಳಿಕ ಇದೀಗ ಲಿಫ್ಟ್, ಟ್ರಾನ್ಸ್‌ಫಾರ್ಮರ್‌,...

ಬಸ್, ಮೆಟ್ರೋ ಬಳಿಕ ಹಾಲು, ಮೊಸರು, ವಿದ್ಯುತ್‌ ದರ ಏರಿಕೆ ಬಳಿಕ ಇದೀಗ ಲಿಫ್ಟ್, ಟ್ರಾನ್ಸ್‌ಫಾರ್ಮರ್‌, ಜನರೇಟರ್ ಪರಿಶೀಲನೆ ಮತ್ತು ರಿನೀವಲ್ ಶುಲ್ಕ ಏರಿಕೆ…!

spot_imgspot_img

ಬೆಂಗಳೂರು: ರಾಜ್ಯ ಸರ್ಕಾರದ ಬೆಲೆ ಏರಿಕೆ ನಿರ್ಧಾರ ಜನರನ್ನು ಕಂಗೆಡಿಸುತ್ತಿದ್ದು ರಾಜ್ಯ ಸರ್ಕಾರ ಒಂದೆಡೆ ಉಚಿತಗಳನ್ನು ಕೊಟ್ಟು ಮತ್ತೊಂದುಕಡೆಯಿಂದ ಜನರಿಂದ ಕಿತ್ತುಕೊಳ್ಳುತ್ತಿದೆ. ಬಸ್, ಮೆಟ್ರೋ ಬಳಿಕ ಹಾಲು, ಮೊಸರು, ವಿದ್ಯುತ್‌ ದರ ಏರಿಕೆ ಬಳಿಕ ಇದೀಗ ರಾಜ್ಯ ಇಂಧನ ಇಲಾಖೆಯು ಲಿಫ್ಟ್, ಟ್ರಾನ್ಸ್‌ಫಾರ್ಮರ್‌, ಜನರೇಟರ್ ಪರಿಶೀಲನೆ ಮತ್ತು ರಿನೀವಲ್ ಶುಲ್ಕ ಏರಿಕೆ ಮಾಡಿದೆ.

ಹಿಂದೆ ಇದ್ದ ದರಕ್ಕಿಂತ ಮೂರು ಪಟ್ಟು ಶುಲ್ಕ ಹೆಚ್ಚಳ ಮಾಡಿದ್ದು 800 ರೂ. ನಿಂದ 1,000 ರೂ.ನಷ್ಟಿದ್ದ ಶುಲ್ಕದ ಮೊತ್ತವನ್ನ ಏಕಾಏಕಿ 5,000 ರೂ. ನಿಂದ 8,000 ರೂ.ಗಳಿಗೆ ಏರಿಕೆ ಮಾಡಲಾಗಿದೆ.

ಮನೆ, ಕಚೇರಿ, ಫ್ಯಾಕ್ಟರಿಗಳಿಗೆ 25 ಕೆವಿಎ ಟ್ರಾನ್ಸ್‌ಫಾರ್ಮರ್‌ ಹಾಕಿಸಿಕೊಂಡಿದ್ದರೆ ಅದನ್ನ ಪರಿಶೀಲನೆ ಮಾಡಲು 1,300 ರೂ.ನಿಂದ 1,500 ರೂ. ಶುಲ್ಕ ಪಡೆದುಕೊಳ್ಳಲಾಗುತ್ತಿತ್ತು. ಆದ್ರೆ ಈಗ ಆ ದರವನ್ನು 3 ರಿಂದ 5 ಸಾವಿರ ರೂ.ಗೆ ಏರಿಕೆ. ಮಾಡಲಾಗಿದೆ. 5 ರಿಂದ 10 ಕೆವಿಎ ಸಣ್ಣ ಜನರೇಟರ್ ಪರಿಶೀಲನೆ ಮತ್ತು ರಿನೀವಲ್‌ಗೆ 2 ಸಾವಿರ ರೂ. ಇದ್ದ ಶುಲ್ಕವನ್ನು ಇದೀಗ 5 ರಿಂದ 8 ಸಾವಿರ ರೂ. ವರೆಗೆ ಏರಿಕೆ ಮಾಡಲಾಗಿದೆ. ರೈತರ ಐಪಿ ಸೆಟ್-25 ಕೆವಿ ವ್ಯಾಟ್‌ಗೆ 3 ಸಾವಿರ ಇದ್ದ ಶುಲ್ಕವನ್ನ ಏಕಾಏಕಿ 11,800 ರೂ.ಗಳಿಗೆ ಏರಿಕೆ ಮಾಡಲಾಗಿದೆ.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page