ರಾಜೇಶ್ ಹೆಗ್ಡೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ

ವಿಶಾಲ್ ಮೋಟಾರ್ಸ್ ಬಸ್ಸಿನ ನಿರ್ವಾಹಕರಾದ ರಾಜೇಶ್ ಹೆಗ್ಡೆ ಅವರು ಬಸ್ಸಿನಲ್ಲಿ ಬಾಕಿ ಆಗಿದ್ದ ಸುಮಾರು ₹3,00,000 ಮೌಲ್ಯದ ಚಿನ್ನದ ಸರವನ್ನು ಪತ್ತೆಹಚ್ಚಿ, ಯಾವುದೇ ಆಸೆಗೆ ಒಳಗಾಗದೆ ಅದನ್ನು ಸುರಕ್ಷಿತವಾಗಿರಿಸಿಕೊಂಡಿದ್ದರು. ಈ ಸರವು ಕುಂದಾಪುರ ಮೂಲದ ನಿಟ್ಟೆ ಕಾಲೇಜು ವಿದ್ಯಾರ್ಥಿನಿ ಸುದೀಕ್ಷಾ ಅವರಿಗೆ ಸೇರಿದ್ದಾಗಿದ್ದು, ರಾಜೇಶ್ ಅವರು ವಾಟ್ಸಾಪ್ ಮೂಲಕ ವಾರಸುದಾರರನ್ನು ಪತ್ತೆಹಚ್ಚಿ ಅವರಿಗೆ ಪ್ರಾಮಾಣಿಕವಾಗಿ ಸರವನ್ನು ಮರಳಿಸಿದರು. ರಾಜೇಶ್ ಹೆಗ್ಡೆ ಅವರ ಈ ಶ್ಲಾಘನೀಯ ಕಾರ್ಯವನ್ನು ವಿಶಾಲ್ ಮೋಟಾರ್ಸ್ ಮಾಲೀಕರು ಮತ್ತು ಸಿಸಿಟಿ ಸಂಸ್ಥೆಯು ಮುಕ್ತಕಂಠದಿಂದ ಅಭಿನಂದಿಸಿವೆ. ಇವರ ಈ ಅಪಾರ ಪ್ರಾಮಾಣಿಕತೆಯು ಸಮಾಜಕ್ಕೆ ದೊಡ್ಡ ಮಾದರಿಯಾಗಿದೆ.






