
ವಿಧಾನಸಭೆ: ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದೀರ್ಘ ಉತ್ತರ ನೀಡಲು ಆರಂಭಿಸಿದ್ದು, ಈ ಬಾರಿ 50 ಸದಸ್ಯರು ಭಾಗವಹಿಸಿ 24 ಗಂಟೆ 45 ನಿಮಿಷಗಳ ಚರ್ಚೆ ನಡೆದಿರುವುದು ವಿಶೇಷವಾಗಿದೆ. ‘ನಾನು 17 ಬಾರಿ ಬಜೆಟ್ ಮಂಡಿಸಿ ಉತ್ತರ ಕೊಟ್ಟಿದ್ದೇನೆ, ಆದರೆ ಇಷ್ಟು ದೊಡ್ಡ ಮಟ್ಟದ ಚರ್ಚೆ ನಡೆದಿರುವುದು ಇದೇ ಮೊದಲು’ ಎಂದು ಹೇಳಿದರು.
ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಸಿಎಂ, ಅವರು ಆಳವಾದ ಅಧ್ಯಯನಕ್ಕಿಂತ ಮಾಧ್ಯಮಗಳಲ್ಲಿ ಹೆಡ್ಲೈನ್ ಪಡೆಯಲು ಹೆಚ್ಚು ಗಮನ ಹರಿಸಿದ್ದಾರೆ. ‘ಕ್ರೆಡಿಟ್ ಕಾರ್ಡ್ ಬಜೆಟ್’ ಮತ್ತು ‘ಖಾಲಿ ಚೊಂಬು’ ಎಂಬ ಟೀಕೆಗಳಿಗೆ ಉತ್ತರಿಸಿ, ಇದು ಖಾಲಿ ಅಲ್ಲ, ಭರ್ತಿಯಾದ ಬಜೆಟ್. ನಮ್ಮ ಬಜೆಟ್ ತುಂಬಿದ ಕೊಡವಿದ್ದಂತೆ, ಅದು ಎಂದಿಗೂ ಖಾಲಿಯಾಗಲು ಸಾಧ್ಯವಿಲ್ಲ’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.






















































