ರಾಜೇಶ್ ಪೂಜಾರಿ ಕರಿಯಾಲು ಅಧ್ಯಕ್ಷತೆಯಲ್ಲಿ, 3ನೇ ವರ್ಷದ ‘ಬಜಗೋಳಿ ದಸರಾ’

ದಿನಾಂಕ 1.10.2025 ಮತ್ತು 2.10.2025 ರಂದು ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಬಜಗೋಳಿ ( ರಿ.) ವತಿಯಿಂದ ಮೂರನೇ ವರ್ಷದ ಸಾರ್ವಜನಿಕ ಶ್ರೀ ಶಾರದ ಮಹೋತ್ಸವ ರಾಜೇಶ್ ಪೂಜಾರಿ ಕರಿಯಾಲು ವಿಜೃಂಭಣೆಯಿಂದ ನಡೆಯಲಿದೆ.

ವೇದಮೂರ್ತಿ ಶ್ರೀ ಎಂ ರಾಮ್ ಭಟ್ ಅರ್ಚಕರು ಮುಡ್ರಾಲು ನೇತೃತ್ವದಲ್ಲಿ ಬಜಗೋಳಿ ಪೇಟೆಯಲ್ಲಿರುವ ಪಂಚಾಯತ್ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ದಿನಾಂಕ 1.10.2025ರಂದು ಬೆಳಗ್ಗೆ ಮುಡ್ರಾಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ವಿಗ್ರಹವನ್ನು ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪನೆ ಪೂಜೆ ನಡೆಯಲಿದೆ. ಬಳಿಕ ಸಾರ್ವಜನಿಕ ದುರ್ಗಾ ಪೂಜೆ, ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ ತೆಳ್ಳಾರು ತಂಡದಿಂದ ಭಜನಾ ಸಂಕೀರ್ತನೆ, ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದ್ದು ಬಳಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ 1:30 ರಿಂದ ಬಜಗೋಳಿ ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಬಳಿಕ ಗಾನ ಗಂಧರ್ವ ಶಶಿಧರ ಕೋಟೆ, ಬೆಂಗಳೂರು ಮತ್ತು ತಂಡದವರಿಂದ ಭಕ್ತಿ ಸಂಗೀತ ಸಂಭ್ರಮ ನಡೆಯಲಿದೆ. ರಾತ್ರಿ 9:30 ರಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾ ಕುಂಭ ಕುಳಾಯಿ ಇವರಿಂದ ತುಳು ನಾಟಕ ‘ಪರಮಾತ್ಮೆ ಪಂಜುರ್ಲಿ’ ನಡೆಯಲಿದೆ.
ದಿನಾಂಕ 2.10.2025 ರಂದು ಗಣಪತಿ ಭಜನಾ ಮಂಡಳಿ ಬಜಗೋಳಿ ಇವರಿಂದ ಭಜನ ಕಾರ್ಯಕ್ರಮ 10:30 ರಿಂದ ನವದುರ್ಗೆ ಛದ್ಮವೇಶ ಮತ್ತು ಕೃಷ್ಣವೇಶ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 1.45 ರ ಬಳಿಕ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಮಧ್ಯಾಹ್ನ 3:00ಗೆ ನಟ ಉಮೇಶ್ ಮಿಜಾರ್ ಮತ್ತು ಬಳಗದವರಿಂದ ‘ತೆಲಿಕೆದ ಗೊಂಚಿಲ್’ ಎಂಬ ನಾಟಕ ನಡೆಯಲಿದೆ. ಸಂಜೆ 5:30ರ ವೇಳೆಗೆ ವಿಸರ್ಜನಾ ಪೂಜೆಯ ಬಳಿಕ 6 ಗಂಟೆಗೆ ವಿಜೃಂಭಣೆಯ ವಿಸರ್ಜನಾ ಮೆರವಣಿಗೆ ಮೂಲಕ ಪೂಜೆ ಸಂಪನ್ನಗೊಳ್ಳಲಿದೆ.
ಊರ-ಪರಊರ ಮಹನೀಯರ ಮತ್ತು ದಾನಿಗಳ ಸಹಕಾರದಿಂದ ನಡೆಯುವ ಈ ಶಾರದಾ ಮಹೋತ್ಸವಕ್ಕೆ ಭಕ್ತಾದಿಗಳೆಲ್ಲರಿಗೂ ಆಹ್ವಾನ ನೀಡಲಾಗಿದೆ.
























































