
ಬಜಗೋಳಿ:ದಿನಾಂಕ 07/09/2025ನೇ ಭಾನುವಾರದಂದು ಮುಂಬೈ ಮೂಲದ Vakrangee ಸಂಸ್ಥೆಯ ವಿನೂತನ ತಂತ್ರಜ್ಞಾನಗಳನ್ನೊಳಗೊಂಡ UPI MINI ATM ಕೇಂದ್ರವು ಪ್ರಶಾಂತ್ ಜೈನ್ ರವರ ಮಾಲಕತ್ವದಲ್ಲಿ ಬಜಗೋಳಿ ಬಾಹುಬಲಿ ಜನರಲ್ ಸ್ಟೋರ್ಸ್ ನಲ್ಲಿ ಶುಭಾರಂಭಗೊಂಡಿತು.
ನೂತನ ATM ಕೇಂದ್ರದ ಉದ್ಘಾಟನೆಯನ್ನು ಮುಡಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೃತಿ.ಡಿ.ಅತಿಕಾರಿ ನೆರವೇರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುಡಾರು ಗ್ರಾಮ ಪಂಚಾಯತ್ ಸದಸ್ಯರುಗಳಾದ ರಜತ್ ರಾಮ್ ಮೋಹನ್ ,ಸುರೇಶ್ ಶೆಟ್ಟಿ, ಪ್ರಶಾಂತ್ ಪೂಜಾರಿ, ಉದ್ಯಮಿಗಳಾದ ಪವನಂಜಯ ಜೈನ್, ಮಹೇಶ್ ವರ್ಮ,ಅಮಿತ್ ಜೈನ್, ರಾಮಕೃಷ್ಣ ನಾಯಕ್,ಸಂತೋಷ್,ಜಿನೇಂದ್ರ ಜೈನ್,ಸುರೇಶ್ ದೇವಾಡಿಗ,ಪೋಸ್ಟ್ ಮ್ಯಾನ್ ದಿವಾಕರ್,ಸಂಸ್ಥೆಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಖ್ಯಸ್ಥರಾದ ಅಭಿಜಿತ್ ಜೈನ್ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥರಾದ ಪ್ರವೀಣ್ ಅಳದಂಗಡಿಯವರು ಭಾಗವಹಿಸಿ ದೀಪವನ್ನು ಬೆಳಗಿಸಿ ನೂತನ UPI ATM ಕೇಂದ್ರಕ್ಕೆ ಶುಭಾಶಂಸನೆಗೈದರು. ಕಾರ್ಕಳ ಟೈಗರ್ಸ್ ನ ಮುಖ್ಯಸ್ಥರಾದ ಬೋಳ ಪ್ರಶಾಂತ್ ಕಾಮತ್ ರವರು ನೂತನ ATM ಕೇಂದ್ರಕ್ಕೆ ಭೇಟಿ ನೀಡಿ ಶುಭಕೋರಿದರು. ಈ ಸಂದರ್ಭದಲ್ಲಿ ಬಾಹುಬಲಿ ಜನರಲ್ ಸ್ಟೋರ್ಸ್ ನ ಮುಖ್ಯಸ್ಥರಾದ ಕಾಂಚನ ಮಾಲಾ,ಪ್ರಕಾಶ್ ಜೈನ್,ಪ್ರವೀಣ್ ಜೈನ್,ಹರ್ಷಿಣಿ ಪ್ರಕಾಶ್ ಜೈನ್,ದೀಪಾ ಪ್ರಶಾಂತ್ ಜೈನ್ ಮತ್ತು ಊರ-ಪರ ಊರ ಗ್ರಾಹಕ ಬಂಧುಗಳು,ಹಿತೈಷಿಗಳು ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಯಲ್ಲಿ Vakrangee ಸಂಸ್ಥೆಯ ಪ್ರಪ್ರಥಮ UPI MINI ATM ಕೇಂದ್ರವು ಇದಾಗಿದ್ದು ನೂತನ ATM ಕೇಂದ್ರದಲ್ಲಿ ಎಲ್ಲಾ ಬ್ಯಾಂಕಿನ ಕಾರ್ಡ್ ಗಳ ಮೂಲಕ ನಗದನ್ನು ಪಡೆಯಬಹುದಾದ ವ್ಯವಸ್ಥೆಯ ಜೊತೆಗೆ ಅತ್ಯಂತ ಸರಳ ರೀತಿಯಲ್ಲಿ ತಮ್ಮ ಮೊಬೈಲ್ ನಿಂದ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಸ್ಕ್ಯಾನರ್ ಬಳಸಿ ನಗದನ್ನು ಪಡೆಯುವ ವಿನೂತನ ವ್ಯವಸ್ಥೆಯು ಇರಲಿದ್ದು ನೂತನ ಸುಸಜ್ಜಿತ ಕೇಂದ್ರವು ಸಾರ್ವಜನಿಕ ಸೇವೆಗೆ ದಿನದ 24 ಗಂಟೆಯೂ ತೆರೆದಿರುತ್ತದೆ. ಬಜಗೋಳಿ ಮತ್ತು ಆಸುಪಾಸಿನ ಗ್ರಾಮಗಳ ಸಾರ್ವಜನಿಕ ಬಂಧುಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ವಿನಂತಿಸುತ್ತಾ ಪ್ರಥಮವಾಗಿ ಬಜಗೋಳಿಯಲ್ಲಿ ಪ್ರಾರಂಭಗೊಂಡ ಅತ್ಯಾಧುನಿಕ ವ್ಯವಸ್ಥೆಯನ್ನೊಳಗೊಂಡ Vakrangee UPI ATM ಕೇಂದ್ರಗಳನ್ನು ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ವಿಸ್ತರಿಸಲಿದ್ದೇವೆಂದು ಜಿಲ್ಲಾ ಮುಖ್ಯಸ್ಥರಾಗಿರುವ ಅಭಿಜಿತ್ ಜೈನ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.