26.8 C
Udupi
Monday, April 13, 2026
spot_img
spot_img
HomeBlogಬಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಕಾರ್ಕಳ, ನಾಲ್ಕನೇ ವಾರ್ಷಿಕ ಮಹಾಸಭೆ

ಬಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಕಾರ್ಕಳ, ನಾಲ್ಕನೇ ವಾರ್ಷಿಕ ಮಹಾಸಭೆ

58.47 ಲಕ್ಷ ನಿವ್ವಳ ಲಾಭ ಮತ್ತು 13.50% ಡಿವಿಡೆಂಟ್ ಘೋಷಣೆ


ಕಾರ್ಕಳ, ಸೆ.13: ಬ0ಟ್ಸ್ ಕ್ರೆಡಿಟ್‌ಕೋ-ಆಪರೇಟಿವ್ ಸೊಸೈಟಿ ನಿ., 4ನೇ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು
13-09-2025 ರಂದು ಹೋಟೆಲ್ ಸ್ವಾಗತ್, ಕಾರ್ಕಳದಲ್ಲಿನಡೆಯಿತು.


ಸೊಸೈಟಿಯ ಅಧ್ಯಕ್ಷರಾದ ಉದಯ ಶೆಟ್ಟಿ ಮುನಿಯಾಲು ಇವರು ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿ, 31-03-2025ರ
ಅ0ತ್ಯಕ್ಕೆ ಸೊಸೈಟಿಯು 18.77 ಕೋಟಿ ಠೇವಣಿ ಸ0ಗ್ರಹಿಸಿ, 17.95 ಕೋಟಿ ಸಾಲ ನೀಡಿ, 36.72 ಕೋಟಿ ವ್ಯವಹಾರವನ್ನು ನಡೆಸಿ,
107 ಕೋಟಿ ವಹಿವಾಟನ್ನು ಮಾಡಿ, 58.47 ಲಕ್ಷ ಲಾಭವನ್ನು ಗಳಿಸಿ, 3 ವರ್ಷದಲ್ಲಿಯೇ ಶೇ.13.50 ಡಿವಿಡೆ0ಡ್ ನೀಡಿರುವುದು
ನಮ್ಮ ಸೊಸೈಟಿಯ ಹೆಮ್ಮೆ ಎಂದು ತಿಳಿಸಿದರು. ಈ ಅಭಿವೃದ್ಧಿಯಲ್ಲಿ ನಮ್ಮ ಸಂಘದ ಸದಸ್ಯರು, ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರ ಸಹಕಾರದಿಂದ ಸೊಸೈಟಿಯು ಅಲ್ಪಾವಧಿಯಲ್ಲಿ ಹೆಚ್ಚಿನ ಆಭಿವೃದ್ಧಿಯೊಂದಲು ಸಾಧ್ಯವಾಯಿತು
ಎಂದು ತಿಳಿಸಿದರು.


ಸೊಸೈಟಿಯ ಉಪಾಧ್ಯಕ್ಷರಾದ ಕೆ.ಮ0ಜುನಾಥ ಶೆಟ್ಟಿಇವರು ಸಭೆಯಲ್ಲಿರುವ ಎಲ್ಲಾ ಸದಸ್ಯರನ್ನು ಸ್ವಾಗತಿಸಿದರು, ನಿರ್ದೇಶಕರಾದ ಶ್ರೀಮತಿ. ವಿನಯ ಅರುಣ್ ಶೆಟ್ಟಿ ಇವರು ಮಹಾಸಭೆಯ ನೋಟೀಸನ್ನು ಓದಿದರು, ನಿರ್ದೇಶಕರಾದ ಪ್ರಶಾಂತ್ ಶೆಟ್ಟಿ ಇವರು
3ನೇ ವಾರ್ಷಿಕ ಮಹಾಸಭೆಯ ನಡವಳಿಯನ್ನು ಮ0ಡಿಸಿದರು,
2024-25ನೇ ಸಾಲಿನ ವಾರ್ಷಿಕ ವರದಿಯನ್ನು ಮುಖ್ಯಕಾರ್ಯನಿರ್ವಣಾದಿಕಾರಿಯಾದ ಕಿಶೋರ್ ಶೆಟ್ಟಿಇವರು ಮಂಡಿಸಿದರು.


ನಿರ್ದೇಶಕರಾದ ಕೆ.ನವೀನ್‌ಚ0ದ್ರ ಶೆಟ್ಟಿ ಇವರು 2024-25ನೇ ಸಾಲಿನ ಲೆಕ್ಕಪರಿಶೋಧಿತ ಲೆಕ್ಕಪತ್ರ ಮಂಡನೆ ಮಾಡಿದರು,
ನಿರ್ದೇಶಕರಾದ ಎ0.ಪ್ರಸನ್ನ ಶೆಟ್ಟಿ ಇವರು 2024-25ನೇ ಸಾಲಿನ ನೈಜಆಯ-ವ್ಯಯ ಪರಿಶೀಲನೆಯನ್ನು ಮ0ಡಿಸಿದರು,
ನಿರ್ದೇಶಕರಾದ ಪ್ರದೀಪ್ ಕುಮಾರ್ ಶೆಟ್ಟಿ 2024-25ನೇ ಸಾಲಿನ ಬಜೆಟಿಗಿ0ತ ಜಾಸ್ತಿ ಖರ್ಚಾದ ಐವೇಜಿಗೆ ಮಂಡಿಸಿದರು.
ಪ್ರಧಾನ ವ್ಯವಸ್ಥಾಪಕರಾದ ಕೃಷ್ಣ ಎಂ.ಶೆಟ್ಟಿ ಇವರು 2025-26ನೇ ಸಾಲಿನ ಬಜೆಟನ್ನು ಮಂಡನೆ ಮಾಡಿದರು. ನಿರ್ದೇಶಕರಾದ
ರಮೇಶ್ ಶೆಟ್ಟಿಇವರು ಲೆಕ್ಕ ಪರಿಶೋಧಕರು ವರದಿಯಲ್ಲಿ ಸೂಚಿಸಿರುವ ನ್ಯೂನತೆಗೆ ಅನುಪಾಲನ ವರದಿಯನ್ನು ಮಂಡಿಸಿದರು.


ನಿರ್ದೇಶಕರಾದ ಸಚ್ಚಿಂದ್ರ ಶೆಟ್ಟಿ ಇವರು 2024-25ನೇ ಸಾಲಿನ ನಿವ್ವಳ ಲಾಭದ ಹಂಚಿಕೆಯನ್ನು ಮಂಡಿಸಿದರು. ನಿರ್ದೇಶಕರಾದ ಎಂ.ಸುಧಾಕರ ಶೆಟ್ಟಿ ಸಾಧಕರ ಸನ್ಮಾನ ಪತ್ರವನ್ನು ವಾಚಿಸಿದರು. ಈ ಸಂದರ್ಭದಲ್ಲಿ ವಿವಿದ ಕ್ಷೇತ್ರದಲ್ಲಿ ಸಾಧನೆ ಮಾಡಿದ 11
ಮಂದಿ ಗಣ್ಯರನ್ನು ಸನ್ಮಾನಿಸಿದರು ಹಾಗೂ 12 ಜನ ಆರ್ಥಿಕ ಹಿಂದುಳಿದ ಬಡ ಕುಟುಂಬದವರಿಗೆ ಧನ ಸಹಾಯವನ್ನು ನೀಡಿದರು.
ವೇದಿಕೆಯಲ್ಲಿ ನಿರ್ದೇಶಕರುಗಳಾದ ಶ್ರೀಮತಿ,ಮಾಲಿನಿ ಎನ್.ರೈ, , ಶ್ರೀಮತಿ. ಸುನಿತಾ ಎಸ್. ಶೆಟ್ಟಿ ಮತ್ತು ಸುಹಾಸ್ ಹೆಗ್ಡೆ
ಉಪಸ್ಥಿತರಿದ್ದು, ಸಭೆಯ ಪ್ರಾರಂಭದಲ್ಲಿ ಸೊಸೈಟಿಯ ಸದಸ್ಯರಾದ ಶ್ರೀಮತಿ,ಲಲಿತಾ ಶೆಟ್ಟಿ ಇವರು ಪ್ರಾರ್ಥನೆಯನ್ನು ಮಾಡಿದರು
ಮತ್ತು ಸಭಾಕಾರ್ಯಕ್ರಮದ ನಿರೂಪಣೆಯನ್ನು ಮತ್ತು ವಂದನಾರ್ಪನೆಯನ್ನು ಸೊಸೈಟಿಯ ಸದಸ್ಯರಾದ ಬಾಲಕೃಷ್ಣ ಶೆಟ್ಟಿ
ಇವರು ನೆರವೇರಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page