ನಾಳೆ ಜು. 7, ಬಜಗೋಳಿ ನೂತನ ಶಾಖೆ ಉದ್ಘಾಟನೆ….
ಕಾರ್ಕಳ ಬಂಟ್ಸ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಬಜ ಗೋಳಿ ಶಾಖೆ ಮುಡಾರು ಗ್ರಾಮದ ಬಜಗೋಳಿ ಬಸ್‌ಸ್ಟ್ಯಾಂಡ್ ಬಳಿಯ ಸುಮಾ ಕಾಂಪ್ಲೆಕ್ಸ್‌ನ ಒಂದನೇ ಮಹಡಿಯಲ್ಲಿ ಜು.7 ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಸೊಸೈಟಿ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ತಿಳಿಸಿದ್ದಾರೆ.
2022ರ ಜ.27ರಂದು ಕುಕ್ಕುಂದೂರು ಜೋಡುರಸ್ತೆ ಪ್ರೈಮ್ ಮಹಲ್‌ನಲ್ಲಿ ಸ್ಥಾಪನೆಯಾದ ಈ ಸಂಘಕ್ಕೆ, ಪ್ರಸ್ತುತ ಎರಡೂವರೆ ವರ್ಷ ತುಂಬಿದ್ದು, ವರ್ಷ ದಿಂದ ವರ್ಷಕ್ಕೆ ಪ್ರಗತಿಯನ್ನು ಸಾಧಿಸುತ್ತಾ ಸದೃಢವಾಗಿ ಬೆಳೆಯುತ್ತಿದೆ. 2024ರ ಮಾ.31ರ ವೇಳೆಗೆ ಈ ಸಂಘವು 13.11 ಕೋಟಿ ರೂ. ಠೇವಣಿಯನ್ನು ಸಂಗ್ರಹಿಸಿ 12.16 ಕೋಟಿ ರೂ. ಸಾಲ ನೀಡಿದ್ದು, ಒಟ್ಟು 25.27 ಕೋಟಿ ರೂ. ವ್ಯವಹಾರ ನಡೆಸಿದೆ. ದುಡಿಯುವ ಬಂಡವಾಳ 13.66 ಕೋಟಿ ರೂ. ಹೆಚ್ಚು ಏರಿಕೆ ಯಾಗಿದ್ದು, 31.46 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷ (31.03.2024 ರಂದು) ವ್ಯವಹಾರಕ್ಕೆ ಸಿಕ್ಕಿದ ಪ್ರಥಮ 12 ತಿಂಗಳ ಅಂತ್ಯಕ್ಕೆ 13.36 ಲಕ್ಷ ರೂ.ಲಾಭ ಗಳಿಸಿ ಪ್ರಥಮ ವರ್ಷದ ಅವಧಿಯಲ್ಲಿಯೇ ಶೇ.12 ಡಿವಿಡೆಂಡನ್ನು ಷೇರು
ದಾರರಿಗೆ ನೀಡಿರುವುದು ಈ ಸಂಘದ ಸಾಧನೆ ಎಂದಿದ್ದಾರೆ.
ಉದ್ಘಾಟನೆ: ಕೇಮಾರು ಶ್ರೀಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ನಲ್ಲೂರು ಮಹಾಲಿಂಗೇಶ್ವರ ದೇವ ಸ್ಥಾನದ ಮೊಕ್ತಸರ ರಘುವೀರ್ ಎ.ಶೆಟ್ಟಿ ಬ್ಯಾಂಕ್ ಶಾಖೆ ಉದ್ಘಾಟಿಸಲಿದ್ದಾರೆ.
ನವಿ ಮುಂಬಯಿ ಘನ್ನೋಲಿ ಮೂಕಾಂಬಿಕಾ ದೇವಳದ ಮೊಕೇಸರ ಅಣ್ಣಿ ಸಿ.ಶೆಟ್ಟಿ ದೀಪ ಬೆಳಗಿಸಲಿದ್ದಾರೆ. ಕರ್ನಾಟಕ ರಾಜ್ಯ ಮಹಾಮಂಡಲದ ಬೆಂಗಳೂರು ನಿರ್ದೇಶಕ ಬಿ.ಜಯಕರ ಶೆಟ್ಟಿ ಇಂದ್ರಾಳಿ ಭದ್ರತಾ ಕೊಠಡಿ ಉದ್ಘಾಟಿಸಲಿದ್ದು, ಸಭಾ ಕಾರ್ಯ ಕ್ರಮವನ್ನು ಮುಂಬಯಿ ಉದ್ಯಮಿ ಮುಡಾರು ಹೆನ್ನೊಟ್ಟುಗುತ್ತು ಕರಿಯಣ್ಣ ಎಸ್.ಶೆಟ್ಟಿ ಉದ್ಘಾಟಿಸಲಿದ್ದಾರೆ. ಕಾರ್ಕಳ ಬಂಟ್ಸ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಪ್ಪಣ್ಣ ಎಂ.ಶೆಟ್ಟಿ ಜೋಗಿ ಬೆಟ್ಟು ಮುಡಾರು, ಮಹಾವೀರ್ ಜೈನ್ ಕೂಷ್ಮಾಂಡಿನಿ ಬಜಗೋಳಿ, তে১. ವೆಂಕಟಗಿರಿ ರಾವ್ ಬಜಗೋಳಿ, ಡಾ. ರವೀಂದ್ರ ಶೆಟ್ಟಿ ಬಜಗೋಳಿ, ಶೇಖರ ಎ.ಶೆಟ್ಟಿ ಮಾಳ ಆನಂದ ನಿಲಯ, ಆನಂದ ಎಂ.ಶೆಟ್ಟಿ ಬಿಚ್ಚನಬೆಟ್ಟು ನಲ್ಲೂರು, ಆನಂದ ಎಂ.ಶೆಟ್ಟಿ ಮಂಜೆ ಮನೆ ಮಿಯ್ಯಾರ್, ಅಮಿತ್ ಶೆಟ್ಟಿ ಮಂಜುಬೆಟ್ಟು ರೆಂಜಾಳ, ಉಮೇಶ್ ರಾವ್ ಚಿರಾಗ್, ಭಾಸ್ಕರ ಎಂ.ಶೆಟ್ಟಿ ನಲ್ಲೂರು, ಜಯಶೆಟ್ಟಿ ಮಾಳ, ಅಶೋಕ್ ಪೂಜಾರಿ ನಲ್ಲೂರು, ಶ್ರುತಿ ಡಿ.ಅಧಿಕಾರಿ ಮುಡಾರು, ಸುಂದರ ಶೆಟ್ಟಿ ನಲ್ಲೂರು, ಪ್ರಕಾಶ್ ಶೆಟ್ಟಿ ನಲ್ಲೂರು, ಶರತ್ ಹೆಗ್ಡೆ ಬೆಳ್ಳಣ್, ಜಗನ್ನಾಥ ಶೆಟ್ಟಿ ಮಾಳ, ಉದಯ ಸಾಲಿಯಾನ್ ಕಾರ್ಕಳ, ಕಿಶೋರ್ ಶೆಟ್ಟಿ ಮಿಯ್ಯಾರ್, ಶಂಕರ್ ಶೆಟ್ಟಿ ಈದು, ಅನಿಲ್ ಎಸ್. ಪೂಜಾರಿ ಮಾಳ ಉಪಸ್ಥಿತರಿದ್ದರು.