2026 – 27ನೇ ಸಾಲಿನ ಅಧ್ಯಕ್ಷರಾಗಿ ಜಯಂತಿ ಶೆಟ್ಟಿ ಕುಕ್ಕುಂದೂರು, ಕಾರ್ಯದರ್ಶಿಯಾಗಿ ಸೂರಜ್ ಶೆಟ್ಟಿ ಸರ್ವಾನುಮತದಿಂದ ಪುನರಾಯ್ಕೆ

ಬಂಟರ ಸೇವಾ ಸಂಘ ರಿ. ಕುಕ್ಕುಂದೂರು
ಇದರ 2026 – 27ನೇ ಸಾಲಿನ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿ ಪದವಿಗೆ ಆಯ್ಕೆ ಪ್ರಕ್ರಿಯೆಯು ನಡೆದಿದ್ದು, ಅಧ್ಯಕ್ಷರಾಗಿ ಜಯಂತಿ ಸುಧಾಕರ್ ಶೆಟ್ಟಿ ಕುಕ್ಕುಂದೂರು, ಕಾರ್ಯದರ್ಶಿಯಾಗಿ ಸೂರಜ್ ಶೆಟ್ಟಿ ನಕ್ರೆ, ಕೋಶಾಧಿಕಾರಿಯಾಗಿ ರಘುನಾಥ್ ಶೆಟ್ಟಿ ಜೋಡುರಸ್ತೆ ಸರ್ವಾನುಮತದಿಂದ ಪುನರಾಯ್ಕೆಗೊಂಡಿದ್ದಾರೆ.
ಉಳಿದಂತೆ, ಎಲ್ಲಾ ಪದಾಧಿಕಾರಿಗಳನ್ನು ಮುಂದುವರಿಸಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ.



















