
ಬಂಟರ ಸೇವಾ ಸಂಘ (ರಿ.) ಕುಕ್ಕುಂದೂರು ವತಿಯಿಂದ ಸಂಘದ ಸದಸ್ಯರಿಗೆ ಹಾಗೂ ಕುಕ್ಕುಂದೂರು ಗ್ರಾಮದ ಬಂಟ ಸಮಾಜದ ಬಾಂಧವರಿಗಾಗಿ ಕೆಸರ್ ಡೊಂಜಿ ಬಂಟ ಕೂಟ ಕಾರ್ಯಕ್ರಮವು ಜುಲೈ 06 ರಂದು ಕುಕ್ಕುಂದೂರು,ಅಯ್ಯಪ್ಪ ನಗರ ಕೊಡಿಯಾಲ್ ಮನೆಯಲ್ಲಿ ಬೆಳಗ್ಗೆ 8.30 ಕ್ಕೆ ನಡೆಯಲಿದೆ.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಸೇವಾ ಸಂಘ ಕುಕ್ಕುಂದೂರು ಅಧ್ಯಕ್ಷರಾದ ಜಯಂತಿ ಸುಧಾಕರ ಶೆಟ್ಟಿ ವಹಿಸಲಿದ್ದಾರೆ,ಬಂಟರ ಯಾನೆ ನಾಡವರ ಮಾತೃ ಸಂಘ ಕಾರ್ಕಳ ತಾಲ್ಲೂಕು ಸಮಿತಿ ಸಂಚಾಲಕರಾದ ವಿಜಯ ಶೆಟ್ಟಿ ಕಾರ್ಕಳ ಕಾರ್ಯಕ್ರಮದ ಉದ್ಘಾಟನೆ ನಡೆಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಾರ್ಕಳ ಮಹಿಳಾ ಬಂಟರ ಸಂಘದ ಅಧ್ಯಕ್ಷರಾದ ಪೂರ್ಣಿಮಾ ಹೆಗ್ಡೆ,ಸುಧಾಕರ ಶೆಟ್ಟಿ, ಅರುಣ ಶೆಟ್ಟಿ,ಬಂಟರ ಸೇವಾ ಸಂಘ ಕುಕ್ಕುಂದೂರು ನಿಕಟ ಪೂರ್ವ ಅಧ್ಯಕ್ಷರಾದ ಕೆ ರವಿ ಶೆಟ್ಟಿ,ಬಂಟರ ಸೇವಾ ಸಂಘ ಕುಕ್ಕುಂದೂರು ಗೌರವಾಧ್ಯಕ್ಷರಾದ ಭರತ್ ಎನ್ ಶೆಟ್ಟಿ,ಬಂಟರ ಸೇವಾ ಸಂಘ ಕುಕ್ಕುಂದೂರು ಗೌರವ ಸಲಹೆಗಾರರಾದ ಯುವರಾಜ್ ಶೆಟ್ಟಿ, ರವಿಕುಮಾರ್ ಶೆಟ್ಟಿ ಕೊಡಿಯಾಲ್ ಮನೆ ಕುಕ್ಕುಂದೂರು ಉಪಸ್ಥಿತಿ ಇರಲಿದ್ದಾರೆ.
ಬಾಲಕ ಬಾಲಕಿಯರಿಗೆ ಮತ್ತು ಮಹಿಳೆಯರು ಮತ್ತು ಪುರುಷರಿಗೆ ಓಟದ ಸ್ಪರ್ಧೆ ನಡೆಯಲಿದೆ, ಹಾಗೂ ವಿವಿಧ ಆಟೋಟ ಸ್ಪರ್ಧೆಗಳ ಜೊತೆ ಮಹಿಳೆಯರಿಗೆ ಹಾಗೂ ಪುರುಷರಿಗೆ ತ್ರೋಬಾಲ್ ಕಬಡ್ಡಿ ಹಗ್ಗ ಜಗ್ಗಾಟ ನಡೆಯಲಿದೆ.
ಸಂಜೆ 5.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಬಂಟರ ಸೇವಾ ಸಂಘ ಕುಕ್ಕುಂದೂರು ಅಧ್ಯಕ್ಷರಾದ ಜಯಂತಿ ಸುಧಾಕರ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಬಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ ಕಾರ್ಕಳ ಉಪಾಧ್ಯಕ್ಷರಾದ ಮಂಜುನಾಥ ಶೆಟ್ಟಿ, ಉದ್ಯಮಿಗಳಾದ ಸುಹಾನ್ ಶೆಟ್ಟಿ, ಉದ್ಯಮಿಗಳಾದ ಗುರುರಾಜ ಮಾಡಬೈಲೂರು, ಪ್ರಭಾ ಗೋಪಾಲಕೃಷ್ಣ ಶೆಟ್ಟಿ, ರಂಜಿತ್ ಬಾರ್ ಅಂಡ್ ರೆಸ್ಟೋರೆಂಟ್ ಮಾಲಕರಾದ ಹರೀಶ್ ಶೆಟ್ಟಿ, ಶೀತಲ್ ಬಾರ್ ಅಂಡ್ ರೆಸ್ಟೋರೆಂಟ್ ಮಾಲಕರಾದ ನವೀನ್ ಶೆಟ್ಟಿ, ಸಂದೀಪ್ ಶೆಟ್ಟಿ ಉದ್ಯಮಿಗಳು ಅಜೆಕಾರು, ಮುರುಳಿ ಶೆಟ್ಟಿ, ಸದಾಶಿವ ಶೆಟ್ಟಿ ಉಪಸ್ಥಿತಿ ಇರಲಿದ್ದಾರೆ.