27.3 C
Udupi
Saturday, August 30, 2025
spot_img
spot_img
HomeBlogಬಂಟರ ಯಾನೆ ನಾಡವರ ಸಂಘ ರಿ. ಬೆಳ್ಮಣ್ ವಲಯ,

ಬಂಟರ ಯಾನೆ ನಾಡವರ ಸಂಘ ರಿ. ಬೆಳ್ಮಣ್ ವಲಯ,

ನೂತನ ಪದಾಧಿಕಾರಿಗಳ ಪದಗ್ರಹಣ,ಪ್ರತಿಭಾ ಪುರಸ್ಕಾರ
ಮತ್ತು ವಿದ್ಯಾರ್ಥಿವೇತನ ವಿತರಣೆ

ಬಂಟರ ಯಾನೆ ನಾಡವರ ಸಂಘ (ರಿ.) ಬೆಳ್ಮಣ್ ವಲಯ ಇದರ ಆಶ್ರಯದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ ಹಾಗೂ ವಾರ್ಷಿಕ ಸಮಾವೇಶ ಆಗಸ್ಟ್ 24ರಂದು ಬೆಳ್ಮಣ್ ನ ಹೋಟೆಲ್ ಸೂರಜ್ ಇನ್ ಸಭಾಂಗಣದಲ್ಲಿ ನಡೆಯಿತು.

ಶ್ರೀಮತಿ ಪ್ರಮೀಳಾ ಸತೀಶ್ ಶೆಟ್ಟಿ ಬೋಳ ಪ್ರಾರ್ಥನೆ ಗೈದರು. ನೂತನ ಪದಾಧಿಕಾರಿಗಳಿಗೆ ಪದ ಪ್ರಧಾನ ನೆರವೇರಿಸಿ ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಮಂಗಳೂರು ಇದರ ಅಧ್ಯಕ್ಷರಾದ ಮಾಲಾಡಿ ಅಜಿತ್ ಕುಮಾರ್ ಪ್ರತಿಜ್ಞಾವಿಧಿ ಬೋಧಿಸಿದರು. ಜಾಗತಿಕ ಬಂಟರ ಒಕ್ಕೂಟ, ಮಂಗಳೂರು ಇದರ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಮುನಿಯಾಲ್ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಉದಯ್ ಕುಮಾರ್ ಶೆಟ್ಟಿ ಮುನಿಯಾಲ್ ಸಂದರ್ಭೋಚಿತ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಮುಂಬೈ ಉದ್ಯಮಿ ಕೃಷ್ಣ ಶೆಟ್ಟಿ ಕಾಪಿಕೆರೆ ನಂದಳಿಕೆ, ಬಾಂಬೆ ಬಂಟ್ಸ್ ಅಸೋಸಿಯೇಷನ್ ಇದರ ನಿಕಟ ಪೂರ್ವ ಅಧ್ಯಕ್ಷರಾದ ಸಿಎ ಸುರೇಂದ್ರ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾದ ಅಶೋಕ್ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಗೌರವ ಕಾರ್ಯದರ್ಶಿ ವಿಜಯ ಜಿ ಶೆಟ್ಟಿ ಹಾಲಾಡಿ, ವಿದ್ಯಾರ್ಥಿವೇತನ ಮತ್ತು ಪ್ರಶಸ್ತಿ ಸಮಿತಿ ಅಧ್ಯಕ್ಷರಾದ ಉಮೇಶ್ ಕುಮಾರ್ ಶೆಟ್ಟಿ, ಉದ್ಯಮಿ ಸ್ಥಳ ದಾನಿ ರವಿ ಶೆಟ್ಟಿ ಇನ್ನಾ, ಖ್ಯಾತ ಸಾಹಿತಿ ಶ್ರೀಮತಿ ಇಂದಿರಾ ಹೆಗ್ಡೆ ಶಿರ್ವ ಮತ್ತು ಉಡುಪಿ ಗ್ರಾಮೀಣ ಬಂಟರ ಸಂಘ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಬಂಟರ ಯಾನೆ ನಾಡವರ ಸಂಘ(ರಿ.) ಬೆಳ್ಮಣ್ ವಲಯ ಇದರ ಅಧ್ಯಕ್ಷರಾದ ಸುಹಾಸ್ ಹೆಗ್ಡೆ ನಂದಳಿಕೆ ಸಭಾಧ್ಯಕ್ಷೆಯನ್ನು ವಹಿಸಿ ಅನಿಸಿಕೆ ವ್ಯಕ್ತಪಡಿಸಿದರು. ಹಿರಿಯರು, ಮಾರ್ಗದರ್ಶಕರು ಆಗಿರುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಎಂ ವಿಠಲ್ ಶೆಟ್ಟಿ ಬೇಲಾಡಿ ಶುಭಾಶಂಸನೆ ಗೈದರು. ಸ್ಥಾಪಕ ಅಧ್ಯಕ್ಷರಾದ ಎನ್. ಶೋಧನ್ ಕುಮಾರ್ ಶೆಟ್ಟಿ ಅತಿಥಿ ಅಭ್ಯಾಗತರನ್ನು, ಆಹ್ವಾನಿತ ಬಂಧುಗಳನ್ನು ಸ್ವಾಗತಿಸಿದರು. ಬೆಳ್ಮಣ್ ವಲಯ ವ್ಯಾಪ್ತಿಯ ಏಳು ಗ್ರಾಮದಲ್ಲಿ ಕೀರ್ತಿ ಶೇಷರಾದ ಹಿರಿಯ ಚೇತನಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗೌರವಾಧ್ಯಕ್ಷರಾದ ಎನ್. ತುಕಾರಾಮ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬೆಳ್ಮಣ್ ವಲಯ ವ್ಯಾಪ್ತಿಯ 90 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರನ್ನು ಗುರುತಿಸಿ ಗೌರವಿಸಲಾಯಿತು. ವಲಯ ವ್ಯಾಪ್ತಿಯ ಯಜತ್ ಶೆಟ್ಟಿ ಬೋಳ, ಕುಮಾರಿ ಸೌಜನ್ಯ ಶೆಟ್ಟಿ ಸೂಡ, ಕುಮಾರಿ ಭೂಮಿಕಾ ಶೆಟ್ಟಿ ಜಂತ್ರ ಬೆಳ್ಮಣ್, ಕುಮಾರಿ ಸಾತ್ವಿ ಶರತ್ ಶೆಟ್ಟಿ ಬೋಳ, ವಿಕೇಶ್ ಶೆಟ್ಟಿ ಸೂಡ ಹಾಗೂ ಶ್ರೀಮತಿ ಸಂಧ್ಯಾ ಸತೀಶ್ ಶೆಟ್ಟಿ ಬೋಳ ಇವರ ವಿವಿಧ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಅಭಿನಂದಿಸಲಾಯಿತು. ವಿದ್ಯಾರ್ಥಿಗಳ ಶಾಶ್ವತದತ್ತಿ ನಿಧಿಗೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು.

ವಿದ್ಯಾರ್ಥಿ ವೇತನ, ವಿಶೇಷ ಕಲಿಕಾ ಪ್ರೋತ್ಸಾಹ ಧನ ಹಾಗೂ ಗ್ರಾಮ ವಾರು ಕಲಿಕಾ ಪ್ರೋತ್ಸಾಹ ಧನ ಹೀಗೆ ವಿವಿಧ ಸ್ತರಗಳಲ್ಲಿ ವಿದ್ಯಾರ್ಥಿಗಳನ್ನು ಗುರುತಿಸಿ ರೂಪಾಯಿ 2,50,500/- ಮೊತ್ತದ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ವಿದ್ಯಾರ್ಥಿವೇತನ ಹಾಗೂ ಕಲಿಕಾ ಪ್ರೋತ್ಸಾಹ ಧನದ ಪಟ್ಟಿಯನ್ನು ನೂತನ ಕಾರ್ಯದರ್ಶಿ ಸತೀಶ್ ಶೆಟ್ಟಿ ಪೆಜತ್ತಬೆಟ್ಟು, ಬೋಳ ಇವರು ವಾಚಿಸಿದರು. ಇದೇ ಸಂದರ್ಭದಲ್ಲಿ ಹಗ್ಗಜಗ್ಗಾಟ ಪಂದ್ಯಾಟದಲ್ಲಿ ಸತತ ಐದು ವರ್ಷಗಳಲ್ಲಿ ಹಲವು ಕೂಟಗಳಲ್ಲಿ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡ ವಲಯದ ಬಂಟ ಪುರುಷರ ತಂಡವನ್ನು ಹಾಗೂ ತ್ರೋಬಾಲ್ ಪಂದ್ಯಾಟದಲ್ಲಿ ಸಾಧನೆಗೈದ ಬೆಳ್ಮಣ್ ವಲಯ ಮಹಿಳಾ ತಂಡವನ್ನು ಗೌರವಿಸಲಾಯಿತು.


ವೇದಿಕೆಯಲ್ಲಿ ಕಾರ್ಯದರ್ಶಿ ರಿತೇಶ್ ಕುಮಾರ್ ಶೆಟ್ಟಿ ಸೂಡಾ, ಬಂಟರ ಸಂಘದ ಯುವ ವಿಭಾಗದ ಅಧ್ಯಕ್ಷ ನಿರಂಜನ್ ಶೆಟ್ಟಿ, ನೂತನ ಗೌರವಾಧ್ಯಕ್ಷ ಕೃಷ್ಣ ರೈ ಬೆಳ್ಮಣ್, ಬಂಟರ ಸಂಘ ಯುವ ವಿಭಾಗದ ನೂತನ ಅಧ್ಯಕ್ಷ ರಾದ ಮನೀಶ್ ಶೆಟ್ಟಿ ಕಾಂತಾವರ, ಕಾರ್ಯದರ್ಶಿ ಸ್ವರೂಪ ಶೆಟ್ಟಿ ನಂದಳಿಕೆ, ಕೋಶಾಧಿಕಾರಿಯಾದ ಧೀರಜ್ ಶೆಟ್ಟಿ ಕಲ್ಯಾ, ಬೆಳ್ಮಣ್ ಗ್ರಾಮ ಸಮಿತಿಯ ಅಧ್ಯಕ್ಷರಾದ ಮೋಹನ್ ದಾಸ್ ಶೆಟ್ಟಿ ಕಡಂಗಲ್ ಬೆಳ್ಮಣ್, ಸಂಜೀವ ಶೆಟ್ಟಿ ಕಲ್ಯಾ, ಕಿರಣ್ ಶೆಟ್ಟಿ ನಂದಳಿಕೆ, ರಿತೇಶ್ ಶೆಟ್ಟಿ ಬೋಳ, ಶ್ರೀಮತಿ ಜಯಂತಿ ಶೆಟ್ಟಿ ಕೆದಿಂಜೆ , ದಿಲೀಪ್ ಶೆಟ್ಟಿ ಕಾಂತಾವರ, ರವಿರಾಜ್ ಶೆಟ್ಟಿ ಸೂಡ, ಕಲ್ಯಾ ಗ್ರಾಮ ಸಮಿತಿಯ ಪೂರ್ವಾಧ್ಯಕ್ಷರಾದ ಸುಧೀರ್ ಶೆಟ್ಟಿ ಉಪಸ್ಥಿತರಿದ್ದರು. ಮೂಡಬಿದ್ರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉಪನ್ಯಾಸಕಿ ಶ್ರೀಮತಿ ಡಾI ಸುಧಾರಾಣಿ ಬಂಟ ಸಮುದಾಯದ ಹಿನ್ನೆಲೆ, ಸಂಪ್ರದಾಯದ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು. ಶ್ರೀಮತಿ ಸುರೇಖಾ ಗಜಾನನ ಶೆಟ್ಟಿ, ಬೋಳ ಅತಿಥಿಯ ಪರಿಚಯ ಗೈದರು. ನೂತನ ಕೋಶಾಧಿಕಾರಿಯಾದ ಉದಯ್ ಶೆಟ್ಟಿ ಗುಂಡುಕಲ್ಲು, ಬೋಳ ಬಂಟ ಸಂಘಟನೆಯ ಧ್ಯೇಯೋದ್ದೇಶಗಳನ್ನು ಸಮಯೋಚಿತವಾಗಿ ಪ್ರಸ್ತುತ ಪಡಿಸಿದರು. ಸತೀಶ ಶೆಟ್ಟಿ ಅಗ್ಗ್ಯೊಟ್ಟು, ಬೋಳ ವಂದನಾರ್ಪಣೆ ಗೈದರು. ಶ್ರೀಮತಿ ನಿಶ್ಮಿತಾ ಶೆಟ್ಟಿ ಮೂಡುಮನೆ, ಬೋಳ ಹಾಗೂ ಮನೀಶ್ ಶೆಟ್ಟಿ, ಕಾಂತಾವರ ಕಾರ್ಯಕ್ರಮ ನಿರ್ವಹಿಸಿದರು.ಸಹ ಭೋಜನ ಬಳಿಕ ಶ್ರೀಮತಿ ರೂಪ ರಾಣಿ ಶೆಟ್ಟಿ ನೇತೃತ್ವದಲ್ಲಿ ಬಂಟ ಸದಸ್ಯರಿಂದ ಮನೋರಂಜನ ಕಾರ್ಯಕ್ರಮ ನೆರವೇರಿತು. ಶರತ್ ಶೆಟ್ಟಿ, ಸಚ್ಚರಿಪೇಟೆ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page