Home Blog ಫೆ. 26,ಕಾರ್ಕಳ ಜೋಡುರಸ್ತೆಯಲ್ಲಿ, “ಮಾನಸ ಕಂಫರ್ಟ್”ಉದ್ಘಾಟನಾ ಸಮಾರಂಭ

ಫೆ. 26,ಕಾರ್ಕಳ ಜೋಡುರಸ್ತೆಯಲ್ಲಿ, “ಮಾನಸ ಕಂಫರ್ಟ್”ಉದ್ಘಾಟನಾ ಸಮಾರಂಭ

0

ಕಾರ್ಕಳ ಜೋಡುರಸ್ತೆಯಲ್ಲಿ, ಕಾರ್ಲ ಸಿಟಿ ಸೆಂಟರ್ ಕಟ್ಟಡದಲ್ಲಿ ನೂತನವಾಗಿ ನಿರ್ಮಿಸಿರುವ “ಮಾನಸ ಕಂಫರ್ಟ್”ಉದ್ಘಾಟನಾ ಸಮಾರಂಭ ಫೆಬ್ರವರಿ 26 ಗುರುವಾರ ಬೆಳಿಗ್ಗೆ 10 ಗಂಟೆಗೆ, ಮಾನಸ ಕಂಫರ್ಟ್ ಆವರಣ ಜೋಡುರಸ್ತೆ ಕಾರ್ಕಳ ಇಲ್ಲಿ ನಡೆಯಲಿದೆ.

ಉದ್ಘಾಟಕರಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವರಾದ ಎಂ.ವೀರಪ್ಪ ಮೊಯ್ಲಿ ಆಗಮಿಸಲಿದ್ದಾರೆ. ಕುಕ್ಕುಂದೂರು ಗ್ರಾಮ ಪಂಚಾಯತ್ ಉಷಾ ಕೆ ಇವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರು ಶಾಸಕರಾದ ವಿ. ಸುನಿಲ್ ಕುಮಾರ್, ನಾರಾಯಣ ಗುರು ಅಭಿವೃದ್ಧಿ ನಿಗಮ ಇದರ ಅಧ್ಯಕ್ಷರಾದ ಮಂಜುನಾಥ ಪೂಜಾರಿ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಮಾಜಿ ಸಚಿವರಾದ ಜಯಪ್ರಕಾಶ್ ಹೆಗ್ಡೆ, ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು, ಜ್ಞಾನಸುಧ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ, ಕ್ರಿಯೇಟಿವ್ ಎಜುಕೇಶನ್ ಫೌಂಡೇಶನ್ ಕಾರ್ಕಳ ಇದರ ಸಹ ಸಂಸ್ಥಾಪಕರಾದ ಡಾ. ಗಣನಾಥ್ ಶೆಟ್ಟಿ, ನ್ಯಾಯವಾದಿಗಳಾದ ಶೇಖರ್ ಮಡಿವಾಳ, ಮಣಿರಾಜ್ ಶೆಟ್ಟಿ, ಪುರಸಭಾ ಸದಸ್ಯರಾದ ಅಶ್ಫಾಕ್ ಅಹಮ್ಮದ್, ಸಂತೋಷ್ ಡಿಸಿಲ್ವಾ ಮತ್ತಿತರರ ಉಪಸ್ಥಿತಿ ಇರಲಿದೆ.

LEAVE A REPLY

Please enter your comment!
Please enter your name here