
ಹೊಸದಿಲ್ಲಿ: ಬುಧವಾರ ಕೇಂದ್ರ ಸರ್ಕಾರವು ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಪಾನ್ ಮಸಾಲದ ಮೇಲೆ ಹೊಸ ಸೆಸ್ ಅನ್ನು ಫೆಬ್ರವರಿ 1ರಿಂದ ವಿಧಿಸಲಾಗುವುದು ಎಂದು ಅಧಿಸೂಚನೆ ಹೊರಡಿಸಿದೆ.
ತಂಬಾಕು ಮತ್ತು ಪಾನ್ ಮಸಾಲದ ಮೇಲಿನ ಹೊಸ ಸುಂಕಗಳು ಜಿಎಸ್‌ಟಿ ದರಕ್ಕಿಂತ ಹೆಚ್ಚುವರಿ ಆಗಿರಲಿದ್ದು ಫೆಬ್ರವರಿ 1ರಿಂದಲೇ ಪಾನ್ ಮಸಾಲ, ಸಿಗರೇಟ್ ಗಳು ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲೆ 40% ರಷ್ಟು ಜಿಎಸ್‌ಟಿ ದರವನ್ನು ವಿಧಿಸಲಾಗುವುದು. ಜೊತೆಗೆ ಬೀಡಿಗಳಿಗೆ ಶೇಕಡ 18ರಷ್ಟು ಸರಕು ಮತ್ತು ಸೇವಾ ತೆರಿಗೆ ಅನ್ವಯವಾಗಲಿದೆ ಎಂದು ತಿಳಿಸಿದೆ.
ಸಂಸತ್ತು ಪಾನ್ ಮಸಾಲ ತಯಾರಿಕೆಯ ಮೇಲೆ ಹೊಸ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಮತ್ತು ತಂಬಾಕಿನ ಮೇಲೆ ಅಬಕಾರಿ ಸಂಕ ವಿಧಿಸಲು ಅನುಮತಿಸುವ ಎರಡು ಮಸೂದೆಗಳನ್ನು ಡಿಸೆಂಬರ್ ನಲ್ಲಿ ಅಂಗೀಕರಿಸಿದ್ದು ಈ ತೆರಿಗೆಗಳು ಫೆಬ್ರವರಿ 1ರಿಂದ ಅನುಷ್ಠಾನಕ್ಕೆ ಬರಲಿದೆ ಎಂದು ಬುಧವಾರ ಸರ್ಕಾರವು ಆದೇಶ ನೀಡಿದೆ.





