ಸಾಧಕರಿಗೆ ಸನ್ಮಾನ – ಸಾಮಾಜಿಕ ಕಾರ್ಯ

ರಾಷ್ಟ್ರೀಯ ಕಬ್ಬಡಿ ಆಟಗಾರ ಮುಟ್ಲುಪಾಡಿ ಪ್ರೀತಮ್ ಶೆಟ್ಟಿ ಯವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪ್ರೀತಂ ಶೆಟ್ಟಿ ಅಭಿಮಾನಿ ಬಳಗ ಮುನಿಯಾಲು ಇವರಿಂದ
ಸಾಧಕರಿಗೆ ಸನ್ಮಾನ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ನಡೆಯಿತು.
ರಾಷ್ಟ್ರೀಯ ಹೈ ಜಂಪ್ ತಾರೆ ಸುದೀಪ್ ಶೆಟ್ಟಿಗಾರ್ ಹಾಗೂ ಕಬ್ಬಡಿ ಪಟು ವಿಪುಲ್ ಶೆಟ್ಟಿ ಯವರಿಗೆ ಸನ್ಮಾನ ,
ಸ ಹಿ ಪ್ರಾ ಶಾಲೆ ಮುಟ್ಲುಪಾಡಿಯ ಗೌರವ ಶಿಕ್ಷಕಿಗೆ ಗೌರವ ಧನ ,ಕರ್ನಾಟಕ ಪಬ್ಲಿಕ್ ಸ್ಕೂಲ್ ಮುನಿಯಾಲು – ಪ್ರೇಯರ್ ಮೈಕ್ ಕೊಡುಗೆ ,ಚೇತನಾ ವಿಶೇಷ ಶಾಲೆ ಕಾರ್ಕಳ – ಇನ್ವರ್ಟರ್ ಕೊಡುಗೆಯನ್ನು ನೀಡುವ ಪ್ರೀತಂ ಶೆಟ್ಟಿ ಸ್ಮರಣೆಯನ್ನು ಅರ್ಥಪೂರ್ಣಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ರಮೇಶ್ ನಾಯರ್, ದಿನೇಶ್ ಪೈ , ವಿಖ್ಯಾತ್ ಶೆಟ್ಟಿ , ಪ್ರಕಾಶ್ ಶೆಟ್ಟಿ ಸಮೃದ್ಧಿ , ರಾಮಚಂದ್ರ ನಾಯಕ್ , ಡಾ . ಸುದರ್ಶನ್ ಹೆಬ್ಬಾರ್ , ಸುಹಾಸ್ ಶೆಟ್ಟಿ ಮುಟ್ಲುಪಾಡಿ , ಕೌಶಿಕ್ ಅಮೀನ್ ಮುನಿಯಾಲು , ಸುರೇಂದ್ರ ವರಂಗ , ರಾಕೇಶ್ ಶೆಟ್ಟಿ ಕುಕ್ಕುಂದೂರ್ ಮುಂತಾದವರು ಉಪಸ್ಥಿತರಿದ್ದರು .






