
ನವದೆಹಲಿ: ಕಾಂಗ್ರೆಸ್ ನಾಯಕ ಉದಿತ್ ರಾಜ್ ದೆಹಲಿಯಲ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರು ಆಧುನಿಕ ರಾವಣನ ಸಂಕೇತ ಎಂದು ಹೇಳಿಕೆ ನೀಡಿದ್ದಾರೆ.
ಪ್ರಧಾನಿ ಮೋದಿ ಆಧುನಿಕ ರಾವಣನ ಸಂಕೇತ. ಅವರು ತಮ್ಮ ಚಿನ್ನದ ಅರಮನೆಯನ್ನು ನಿರ್ಮಿಸುತ್ತಿದ್ದಾರೆ. ಒಮ್ಮೆ ಅದನ್ನು ಪ್ರವೇಶಿಸಿದ ನಂತರ ಅದೇ ಚಿನ್ನದ ಅರಮನೆ ಉರಿದು ಹೋಗುವುದನ್ನು ನೋಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಸಂಜಯ್ ರಾವತ್ ಕೂಡ ದೆಹಲಿಯ ರಾವಣನನ್ನು ಸುಡಬೇಕು. ದೆಹಲಿಯ ರಾವಣನನ್ನು ಸುಡುವ ದಿನ ಹತ್ತಿರದಲ್ಲಿದೆ. ಪ್ರಧಾನಿ ಮೋದಿ ಹೆಚ್ಚು ಕಾಲ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಶೀಘ್ರದಲ್ಲೇ ಅವರ ಲಂಕಾದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಹೇಳಿಕೆ ನೀಡಿದ್ದಾರೆ.



















