
ಉಡುಪಿ: ಉಡುಪಿಯ ಪ್ರತಿಷ್ಠಿತ ಜವಳಿ ಮಳಿಗೆ ‘ಗೀತಾಂಜಲಿ ಸಿಲ್ಕ್’ ಮತ್ತು ಶಾಂತಿಸಾಗರ್ ಹೊಟೇಲ್‌ನ ಸಂಸ್ಥಾಪಕರಾದ ನೀರೆ ಬೈಲೂರು ಗೋವಿಂದ ನಾಯಕ್ (89) ಮೇ 19 ರಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಗೋವಿಂದ ನಾಯಕ್ ಅವರು ಪುತ್ರರಾದ ಶ್ರೀರಾಮಕೃಷ್ಣ ನಾಯಕ್ (ಆರ್.ಕೆ), ಲಕ್ಷ್ಮಣ ನಾಯಕ್, ರಮೇಶ ನಾಯಕ್, ಹರೀಶ್ ನಾಯಕ್, ಸಂತೋಷ್ ವಾಗ್ಳೆ, ಸುನೀತ ಪ್ರಕಾಶ್ ಪ್ರಭು, ಸೊಸೆಯಂದಿರು, ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಗೋವಿಂದ ನಾಯಕ್ ಅವರ ನಿಧನದ ಹಿನ್ನೆಲೆಯಲ್ಲಿ ಉಡುಪಿಯ ಗೀತಾಂಜಲಿ ಸಿಲ್ಕ್, ನ್ಯೂ ಶಾಂತಿ ಸಾಗರ್ ರೆಸ್ಟೋರೆಂಟ್, ಶಾಂತಿ ಸಾಗರ್, ಮಣಿಪಾಲದ ಶಾಂತಿ ಸಾಗರ್ ಹೋಟೆಲ್ಗಳಿಗೆ ರಜೆ ಘೋಷಿಸಲಾಗಿದ್ದು ಗ್ರಾಹಕರು ಸಹಕರಿಸುವಂತೆ ಆಡಳಿತ ಮಂಡಳಿಯು ಮನವಿ ಮಾಡಿದೆ.