
ಪ್ರತಿಭಾ ಕಾರಂಜಿ ಕಲೋತ್ಸವ – ವರ್ಧಮಾನ ವಿಜಯೋತ್ಸವ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಕಾರ್ಕಳ, ಸಮೂಹ ಸಂಪನ್ಮೂಲ ಕೇಂದ್ರ ಸಾಣೂರು ಆಯೋಜಿಸಿದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವವು ದಿನಾಂಕ 22.10 2024 ರಂದು ಜೇಸಿಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೆರವೇರಿತು.
ವರ್ಧಮಾನ ಪ್ರಾಥಮಿಕ ಶಾಲೆ, ಸಾಣೂರು ಇಲ್ಲಿಯ ವಿದ್ಯಾರ್ಥಿಗಳು
9 ಪ್ರಥಮ ಬಹುಮಾನ,
3 ದ್ವಿತೀಯ ಬಹುಮಾನ ಹಾಗೂ
1 ತೃತೀಯ ಬಹುಮಾನವನ್ನು ಪಡೆದಿರುತ್ತಾರೆ.
1ರಿಂದ 4 ವಿಭಾಗ : ಕನ್ನಡ ಕಂಠಪಾಠ -ಅನ್ವಿ ಕೋಟ್ಯಾನ್ ಪ್ರಥಮ,
ಇಂಗ್ಲಿಷ್ ಕಂಠಪಾಠ – ಆದಿತ್ರಿಯಾ ಸಿಂಧು – ಪ್ರಥಮ.
ಧಾರ್ಮಿಕ ಪಠಣ (ಭಗವದ್ಗೀತೆ) ಲಕ್ಷ್ಮಿ ಪೈ – ಪ್ರಥಮ.
ಚಿತ್ರಕಲೆ – ವಿಹಾ ಅರ್ಜುನ್ ಕುಮಾರ್ – ಪ್ರಥಮ.
ಕಥೆ ಹೇಳುವುದು – ಪ್ರತ್ಯುಷ ಕುಂದರ್ – ಪ್ರಥಮ.
ಕ್ಲೇ ಮಾಡಲಿಂಗ್ – ಆದ್ಯಶ್ರೀ – ಪ್ರಥಮ.
ಅಭಿನಯ ಗೀತೆ – ಆಧ್ಯ ಡಿ. ಎ. – ತೃತೀಯ.
ಭಕ್ತಿ ಗೀತೆ – ಪ್ರತ್ಯುಷ ಕುಂದರ್ – ದ್ವಿತೀಯ.
5ರಿಂದ 7ನೇ ವಿಭಾಗ :
ಅಭಿನಯ ಗೀತೆ – ಚಿತ್ರಾ ಪೈ – ಪ್ರಥಮ.
ಇಂಗ್ಲಿಷ್ ಕಂಠಪಾಠ – ನಿಹಾಲ್ ಎಚ್ – ಪ್ರಥಮ.
ಅರೇಬಿಕ್ ಪಠಣ – ಆಯೇಷಾ ಇಕ್ರಾ – ಪ್ರಥಮ.
ದೇಶಭಕ್ತಿ ಗೀತೆ – ಚಿತ್ರಾ ಪೈ – ದ್ವಿತೀಯ.
ಆಶುಭಾಷಣ – ಆತ್ಮಿಕ ಕಾಮತ್ – ದ್ವಿತೀಯ. ಬಹುಮಾನ ವಿಜೇತರನ್ನು ಶಾಲಾ ಸಂಚಾಲಕಿ ಶಶಿಕಲಾ. ಕೆ. ಹೆಗ್ಡೆ, ಕುಮಾರಯ್ಯ ಹೆಗ್ಡೆ, ಕರ್ತವ್ಯ ಜೈನ್ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದರು.
















































