
ಪೋಷಕರು ಮಗು ಕಾರಿನೊಳಗಿರುವುದನ್ನು ಮರೆತು ಕಾರ್ ಲಾಕ್ ಮಾಡಿದ್ದು, 3 ವರ್ಷದ ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಕೋಟಾದ ಜೋರಾವರಪುರ ಗ್ರಾಮದಲ್ಲಿ ನಡೆದಿದೆ.
ಸಂತ್ರಸ್ತೆಯ ತಂದೆ ಪ್ರದೀಪ್ ನಗರ, ತನ್ನ ಪತ್ನಿ ಮತ್ತು ಇಬ್ಬರು ಪುತ್ರಿಯರೊಂದಿಗೆ ಕೋಟಾದ ಜೋರಾವರಪುರ ಗ್ರಾಮಕ್ಕೆ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದು ಸ್ಥಳವನ್ನು ತಲುಪಿದ ನಂತರ, ಗೋರ್ವಿಕಾ ಅವರ ತಾಯಿ ಮತ್ತು ಇನ್ನೊಬ್ಬ ಬಾಲಕಿ ಕಾರಿನಿಂದ ಇಳಿದರು. ಪ್ರದೀಪ್ ಕಾರು ಪಾರ್ಕ್ ಮಾಡಲು ಹೋದರು. ಗೋರ್ವಿಕ ತನ್ನ ಹೆಂಡತಿ ಮತ್ತು ಹಿರಿಯ ಮಗಳೊಂದಿಗೆ ಹೊರಟು ಹೋಗಿದ್ದಾಳೆ ಎಂದು ಭಾವಿಸಿದ ಪ್ರದೀಪ್ ಕಾರನ್ನು ಪಾರ್ಕ್ ಮಾಡಿದ ನಂತರ ಲಾಕ್ ಮಾಡಿದನು. ಗೋರ್ವಿಕಾಳ ತಾಯಿ ಮಗು ಅಪ್ಪನ ಜೊತೆ ಬರುತ್ತಿದ್ದಾಳೆ ಎಂದು ಭಾವಿಸಿದಳು.
ಸ್ವಲ್ಪ ಸಮಯದ ನಂತರ ಸಮಾರಂಭದಲ್ಲಿ ತಂದೆ-ತಾಯಿ ಮಗು ಇಬ್ಬರೂ ಜೊತೆಗಿಲ್ಲ ಎಂದು ಅರಿತುಕೊಂಡರು. ಕಾರು ಪಾರ್ಕಿಂಗ್ ಮಾಡಿದ ಸ್ಥಳಕ್ಕೆ ಧಾವಿಸಿದಾಗ ಬಾಲಕಿ ಕಾರಿನ ಹಿಂದಿನ ಸೀಟಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಆಕೆ ಸಾವನ್ನಪ್ಪಿದ್ದಾಳೆಂದು ಘೋಷಿಸಿದ್ದಾರೆ. ಬಾಲಕಿ ಸುಮಾರು ಎರಡು ಗಂಟೆಗಳ ಕಾಲ ಕಾರಿನಲ್ಲಿ ಲಾಕ್ ಆಗಿದ್ದಳು ಎಂದು ತಿಳಿದುಬಂದಿದೆ.