
ಬೆಂಗಳೂರು: ಅರಣ್ಯ ಮತ್ತು ಪರಿಸರ ಇಲಾಖೆಯು ಪುಣ್ಯಕ್ಷೇತ್ರಗಳ ನದಿ ತೀರದಲ್ಲಿ ಶಾಂಪೂ ಹಾಗೂ ಸೋಪುಗಳ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದೆ.
ಭಕ್ತಾದಿಗಳು ನದಿ ತೀರದಲ್ಲಿ ಸ್ನಾನ ಮಾಡಿದ ನಂತರ ಅರ್ಧಂಬರ್ಧ ಖಾಲಿಯಾದ ಸೋಪುಗಳನ್ನು ಕವರ್‌ಗಳಲ್ಲಿ ಹಾಕಿ ನದಿಯಲ್ಲೇ ಬಿಡುತ್ತಿದ್ದರು. ಇದರಿಂದ ನದಿ ನೀರಿನಲ್ಲಿ ಮಾಲಿನ್ಯ ಹೆಚ್ಚಾಗುತ್ತಿದೆ. ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಅರಣ್ಯ ಮತ್ತು ಪರಿಸರ ಇಲಾಖೆ ಈ ನಿರ್ಧಾರ ಕೈಗೊಂಡಿದೆ.
ಹೀಗಾಗಿ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ನದಿ ದಡಗಳಲ್ಲಿ ಸೋಪು ಹಾಗೂ ಶಾಂಪೂ ಮಾರಾಟ ಮಾಡದಂತೆ ನಿಷೇಧ ಹೇರಿ ಭಕ್ತರು ತಮ್ಮ ವಸ್ತುಗಳನ್ನು ನದಿಗಳಲ್ಲಿ ವಿಸರ್ಜಿಸದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿ ಆದೇಶ ಹೊರಡಿಸಿದ್ದಾರೆ.






















































