
ದೇಶ ಸೇವೆಗಿಂತ ಮಿಗಿಲಾದ ಅನ್ಯ ಕಾರ್ಯಕ್ಷೇತ್ರವಿಲ್ಲ : ವೀರ ಸೈನಿಕ ಶ್ರೀಕಾಂತ್ ಭಟ್ ಎಳ್ಳಾರೆ.
ಕಾರ್ಕಳ : ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಯೋಧರು ತಮ್ಮ ಸಾಧನಾ ಸಾಮರ್ಥ್ಯ ಪ್ರದರ್ಶನಗೊಳಿರುವುದು ಮಾತ್ರವಲ್ಲ,ಇಡೀ ಜಗತ್ತಿಗೆ ಭಾರತದ ಸೇನೆಯ ಶಕ್ತಿಯನ್ನು ತೋರಿಸಿಕೊಟ್ಟಿದೆ,ಸೈನಿಕರ ಸರ್ವ ಪ್ರಯತ್ನಗಳ, ಕಾರ್ಯಗಳ ನಡುವೆಯೂ ಸೈನಿಕರ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ವೃದ್ಧಿಗೆ ಭಾರತೀಯರೆಲ್ಲರೂ ಜೊತೆಯಾಗಿ ಸಲ್ಲಿಸಿದ ಸೇವೆ ಮತ್ತು ಪ್ರಾರ್ಥನೆ , ನಿಜವಾಗಿಯೂ ಸೈನಿಕರಿಗೆ ವರದಾನವಾಗಿದೆ.
ಒಂದಷ್ಟು ದಶಕಗಳ ಹಿಂದಿನ ಭಾರತೀಯರ ಮನಸ್ಥಿತಿ ಆರ್ಮಿ ಅಂದರೆ ಅಲ್ಲಿ ಸಾವನ್ನು ಗೆದ್ದು ಬರುವ ಸಾಧ್ಯತೆ ಕಡಿಮೆ ಎಂಬುದಾಗಿತ್ತು, ಆದರೆ ಇಂದು ಅಂತಹ ಪರಿಸ್ಥಿತಿ ಭಾರತೀಯ ಸೇನೆಯಲ್ಲಿಲ್ಲ,ಯಾರೂ ಸೈನಿಕರಾಗಲು ಭಯಪಡಬೇಕಾಗಿಲ್ಲ,ಪ್ರಥಮ ಫೀಲ್ಡ್ ಮಾರ್ಷಲ್ ಕರಿಯಪ್ಪನವರು ನಮ್ಮ ಕರ್ನಾಟಕದವರು ಎನ್ನುವ ಹೆಮ್ಮೆ ನಮಗಿದೆ.
ಇಂದು ಗ್ರಾಮೀಣ ವಿದ್ಯಾರ್ಥಿಗಳಿಗೆ ಸೇನೆಗೆ ಸೇರುವ ವಿಶೇಷವಕಾಶಗಳಿವೆ, ಅಗ್ನಿವೀರ್ ಒಂದು ವಿಪುಲ ಅವಕಾಶ ಇದರ ಪ್ರಯೋಜನವನ್ನು ಪಡೆದುಕೊಳ್ಳಲು ಉತ್ಸುಕರಾಗಬೇಕಿದೆ, ಎಂದು ಪಾಕ್ ಉಗ್ರಗಾಮಿಗಳ ಪಹಲ್ಗಾಮ ಪ್ರಕರಣಕ್ಕೆ ಪ್ರತಿಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಸ್ವದೇಶಿ ನಿರ್ಮಿತ ಆಕಾಶ್ ಮಿಸೈಲ್ ಆಪರೇಟರ್ ಆಗಿ ಯಶಸ್ವಿ ಕರ್ತವ್ಯ ನಿರ್ವಹಿಸಿದ ಶ್ರೀಕಾಂತ್ ಭಟ್ ಎಳ್ಳಾರೆ ಇವರನ್ನು ಕಾರ್ಕಳ ಪಾಲಿಟೆಕ್ನಿಕ್ ಕಾಲೇಜು ಇದರ ಪ್ರಥಮ ವರ್ಷದ ವಿದ್ಯಾರ್ಥಿಗಳ ಇಂಡಕ್ಷನ್ ಪ್ರೋಗ್ರಾಮ್ ಕಾರ್ಯಕ್ರಮದಲ್ಲಿ ಸೈನಿಕ ನೆಲೆಯಲ್ಲಿ ಗುರುತಿಸಿ ಗೌರವಿಸುವುದರೊಂದಿಗೆ ಸೈನಿಕರ ಬಗೆಗಿನ ಮಾಹಿತಿಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುವಲ್ಲಿ ಅವಕಾಶ ಒದಗಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲರಾದ ಕುಮಾರ್ ಕೆ ಅವರು ಮಾತನಾಡುತ್ತಾ, ನಮ್ಮ ಸಂಸ್ಥೆಯಲ್ಲಿ ಸೈನಿಕರನ್ನು ಗುರುತಿಸಿ ಗೌರವಿಸುವ ಅವಕಾಶ ಒದಗಿದ್ದು ದೇಶದ ಕಿರು ಸೇವೆ ಮಾಡಿದಷ್ಟು ಖುಷಿಗೆ ಕಾರಣವಾಗಿದೆ, ಸರಕಾರದ ವ್ಯವಸ್ಥೆಯಲ್ಲಿ ಅಧಿಕ ಶ್ರಮಪಡುವವರಿಗೆ ವೇತನದ ಮಟ್ಟ ಕಡಿಮೆ ಇದೆ ಮುಂದಿನ ದಿನಗಳಲ್ಲಿ ಇದು ಬದಲಾಗಬೇಕಿದೆ, ಮನೆಯಲ್ಲೇ ಕುಳಿತು ಯುದ್ಧ ಎಂದಾಗ ಭಯಪಡುವ ನಾವುಗಳು ನಿಜವಾಗಿಯೂ ಸೈನಿಕರ ಗುಂಡಿಗೆಯನ್ನು ಮೆಚ್ಚಲೇಬೇಕು ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಯೂನಿಯನ್ ಬ್ಯಾಂಕ್ ಶಾಖಾ ಹಿರಿಯ ಪ್ರಬಂಧಕರಾದ ಸುರೇಶ್, ಸಂಸ್ಥೆಯ ವಿಭಾಗಾಧಿಕಾರಿಗಳಾದ ಚಿತ್ರ ಕುಮಾರ್, ಕೆ ವಿ ಪವಿತ್ರ,ಮಲ್ಲಿಕಾ ಕೆ,ಪುನೀತ್ ಉಪಸ್ಥಿತರಿದ್ದರು,
ವಿದ್ಯಾರ್ಥಿಗಳಾದ ಆಕಾಶ್ ರಾಥೋಡ್,ಪ್ರಜ್ವಲ್ ಡಿಸೋಜಾ, ಗಾಯತ್ರಿ ಮತ್ತಿತರರು ಸಿದ್ಧಪಡಿಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ವಿಡಿಯೋವನ್ನು ಪ್ರದರ್ಶಿಸಲಾಯಿತು.
ವಿದ್ಯಾರ್ಥಿ ವಿಜಯ್ ಆಚಾರ್ಯ ಪ್ರಾರ್ಥಿಸಿ ಸಂಸ್ಥೆಯ ಗುಣಪಾಲ್ ಜೈನ್ ಸ್ವಾಗತಿಸಿ, ಬೋಧಕರಾದ ಹರೀಶ್ ಕುಮಾರ್ ಬಿ ಕಾರ್ಯಕ್ರಮ ನಿರೂಪಿಸಿ,ಭೋದಕ ಪತ್ರಕರ್ತರಾದ ಬಾಲಚಂದ್ರ ಹೆಬ್ಬಾರ್ ಯೋಧರನ್ನು ಪರಿಚಯಿಸಿ ಸಹಾಯಕ ಬೋಧಕ ಸುಬ್ರಹ್ಮಣ್ಯ ವಂದಿಸಿದರು.