ಬಿಸಿಸಿಐ ನಿಂದ 21 ಕೋಟಿ ರೂ. ಬಹುಮಾನ ಘೋಷಣೆ

ನವದೆಹಲಿ: ಪಾಕಿಸ್ತಾನ ತಂಡದ ವಿರುದ್ಧ , ನಡೆದ ಏಷ್ಯಾ ಕಪ್ 2025 ಫೈನಲ್ ನಲ್ಲಿ ಭಾರತ ಜಯಗಳಿಸಿದ್ದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 21 ಕೋಟಿ ರೂಪಾಯಿಗಳ ಬಹುಮಾನ ಘೋಷಿಸಿದೆ.
ಭಾರತವು 9ನೇ ಬಾರಿಗೆ ಏಷ್ಯಾ ಕಪ್ ಗೆದ್ದಿದ್ದು, ಈ ಭಾರಿ ಫೈನಲ್ ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಕಾರಣ ದೇಶದಲ್ಲಿ ಸಂಭ್ರಮಾಚರಣೆ ಹಿಮ್ಮಡಿಯಾಗಿದೆ.
ಇನ್ನು ಏಷ್ಯಾ ಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಜಯಗಳಿಸಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಅಪರೇಷನ್ ಸಿಂಧೂರಕ್ಕೆ ಹೋಲಿಸಿ ತಂಡವನ್ನು ಅಭಿನಂದಿಸಿದ್ದಾರೆ. ಕ್ರೀಡಾ ಮೈದಾನದಲ್ಲಿ “ಅಪರೇಷನ್ ಸಿಂಧೂರ, ಫಲಿತಾಂಶ ಒಂದೇ ಭಾರತಕ್ಕೆ ಜಯ” ಎಂದು ಬರೆದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.






















































