
ನವದೆಹಲಿ: ಕಾಂಗ್ರೆಸ್ ನಾಯಕ ಪಿ. ಚಿದಂಬರಂ ವೆಬ್‍ಸೈಟ್‍ವೊಂದಕ್ಕೆ ನೀಡಿರುವ ಸಂದರ್ಶನಲ್ಲಿ ಮಾತನಾಡಿ ಪಹಲ್ಗಾಮ್‌ನಲ್ಲಿ ದಾಳಿ ಮಾಡಿ 26 ಪ್ರವಾಸಿಗರನ್ನು ಕೊಂದಿದ್ದ ಉಗ್ರರು ಪಾಕಿಸ್ತಾನದವರಲ್ಲ. ಪಾಕಿಸ್ತಾನದಿಂದ ಬಂದಿರೋದಕ್ಕೆ ಯಾವುದೇ ಆಧಾರ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಇಷ್ಟು ವಾರಗಳ ಕಾಲ ಎನ್‍ಐಎ ಏನು ತನಿಖೆ ಮಾಡಿದೆ ಎಂದು ಬಹಿರಂಗಪಡಿಸುತ್ತಿಲ್ಲ. ಉಗ್ರರನ್ನು ಪತ್ತೆ ಹಚ್ಚಿದ್ದಾರಾ? ಉಗ್ರರು ಎಲ್ಲಿಂದ ಬಂದಿದ್ದಾರೆ ಅನ್ನೋದು ಪತ್ತೆಯಾಗಿದೆಯಾ? ನಮ್ಮ ಪ್ರಕಾರ ಅವರು ಸ್ವದೇಶಿ ಉಗ್ರರು. ಉಗ್ರರು ಪಾಕಿಸ್ತಾನದಿಂದ ಬಂದಿದ್ದಾರೆ ಎಂದು ಏಕೆ ಊಹೆ ಮಾಡಿಕೊಳ್ತಿದ್ದಾರೆ? ಅವರು ಪಾಕಿಸ್ತಾನದಿಂದ ಬಂದಿರೋದಕ್ಕೆ ಯಾವುದೇ ಆಧಾರವಿಲ್ಲ ಎಂದು ಪಾಕಿಸ್ಥಾನಕ್ಕೆ ಚಿದಂಬರಂ ಕ್ಲೀನ್‍ಚಿಟ್ ಕೊಟ್ಟಿದ್ದಾರೆ.