26.3 C
Udupi
Monday, April 13, 2026
spot_img
spot_img
HomeBlogಪರಶುರಾಮ ಥೀಮ್ ಪಾರ್ಕ್ ವಿವಾದದಲ್ಲಿ, ಹಿಂದುತ್ವ ಮತ್ತು ಧಾರ್ಮಿಕ ವಿಚಾರದ ಮಾತು ಸರಿಯಲ್ಲ, ಹಿಂದೂ ಮುಖಂಡರ...

ಪರಶುರಾಮ ಥೀಮ್ ಪಾರ್ಕ್ ವಿವಾದದಲ್ಲಿ, ಹಿಂದುತ್ವ ಮತ್ತು ಧಾರ್ಮಿಕ ವಿಚಾರದ ಮಾತು ಸರಿಯಲ್ಲ, ಹಿಂದೂ ಮುಖಂಡರ ಹೇಳಿಕೆ ಸ್ವಾಗತರ್ಹ

ಪ್ರತಿಮೆ ನಿರ್ಮಾಣದ ಮೊದಲೇ ಕಾಳಜಿ ವಹಿಸಿದ್ದರೆ, ಭಗ್ನ ಪ್ರತಿಮೆ ನೋಡುವ ದೌರ್ಭಾಗ್ಯ ಬರುತ್ತಿರಲಿಲ್ಲ: ಶುಭದ ರಾವ್

ಕಾರ್ಕಳ: ಪರಶುರಾಮ ಥೀಮ್ ಪಾರ್ಕ್ ವಿವಾದವನ್ನು ಹಿಂದುತ್ವ ಮತ್ತು ಧಾರ್ಮಿಕ ವಿಚಾರದಲ್ಲಿ ಎಳೆದು ತರುವುದು ಸರಿಯಲ್ಲ ಎಂದು ವಿಶ್ವಹಿಂದೂ ಪರಿಷತ್ ಪ್ರಮುಖರು ನೀಡಿದ ಹೇಳಿಕೆಯನ್ನು ಸ್ವಾಗತಿಸುತ್ತೇವೆ ಆದರೆ ಪ್ರತಿಮೆ ನಿರ್ಮಾಣದ ಮೊದಲೇ ಈ ಕಾಳಜಿ ವಹಿಸಿದ್ದರೆ ಪರಶುರಾಮನ ಭಗ್ನ ಪ್ರತಿಮೆ ನೋಡುವ ದುರ್ಬಾಗ್ಯ ಬರುತ್ತಿರಲಿಲ್ಲ, ಕಾಲ ಮಿಂಚಿಲ್ಲ ಇನ್ನಾದರೂ ಬೀದಿಗಿಳಿದು ಹೋರಾಡುವಂತೆ ನಿಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಕಾಂಗ್ರೇಸ್ ವಕ್ತಾರ ಶುಭದರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಸಕ ಸುನೀಲ್ ಕುಮಾರ್ ರವರು ಮೊದಲಿನಿಂದಲೂ ಥೀಮ್ ಪಾರ್ಕ್ ಒಂದು ಧಾರ್ಮಿಕ ಕ್ಷೇತ್ರ, ಪ್ರವಾಸೋದ್ಯಮ ಕ್ಷೇತ್ರ ಎಂದು ಹೇಳುತ್ತಲೇ ಬಂದಿದ್ದಾರೆ, ಸಾವಿರಾರು ಭಕ್ತರ ಕೈಯಿಂದ ಶಂಕವನ್ನೂ ಊದಿಸಿದ್ದಾರೆ ನೂರಾರು ಭಜನಾ ತಂಡಗಳಿಂದ ಮೆರವಣಿಗೆ ಮಾಡಿ ಭಜನಾ ಕಾರ್ಯಕ್ರಮವನ್ನೂ ನಡೆಸಿದ್ದಾರೆ, ಎಲ್ಲಕ್ಕಿಂತ ಮಿಗಿಲಾಗಿ ಪರಶುರಾಮ ಕೃತಕ ನಕಲಿ ಪ್ರತಿಮೆಯನ್ನು ನಿರ್ಮಿಸಿ ಗೋರ ಅಪಮಾನವನ್ನು ಮಾಡಿ ಧಾರ್ಮಿಕ ನಿಂದನೆಯ ಎಲ್ಲಾ ಎಲ್ಲೆಯನ್ನು ಮೀರಿದ್ದಾರೆ ಅಷ್ಟೇ ಅಲ್ಲದೇ ಅವರೇ ನಿರ್ಮಿಸಿದ ಪ್ರತಿಮೆಯನ್ನು ಅವರದ್ದೇ ಪಕ್ಷದ ಕಾರ್ಯಕರ್ತರು ಸುತ್ತಿಗೆಯಿಂದ ಹೊಡೆದು ಆಗಿದೆ ಇದಕ್ಕಿಂತ ದೊಡ್ಡ ಧರ್ಮದ ಅವಹೇಳನ ಬೇಕೆ ?ಅವರು ಎಂದು ಪ್ರಶ್ನಿಸಿದ್ದಾರೆ.

ಥೀಮ್ ಪಾರ್ಕ್ ನಿರ್ಮಾಣಕ್ಕೆ ಬಿಡುಗಡೆಗೊಂಡ ಮೊತ್ತಕಿಂತ ದ್ವಿಪಟ್ಟು ಕಾಮಗಾರಿ ನಡೆಸಿ ಈಗ ಅನುದಾನಕ್ಕೆ ತಡೆಯೊಡ್ಡಿದ್ದಾರೆ ಎಂದರೆ ಯಾರು ತಾನೆ ನಂಬಲು ಸಾದ್ಯ, ನಾವೆಂದೂ ಪಾರ್ಕ್ ನಿರ್ಮಾಣಕ್ಕೆ ವಿರೋದಿಸಿಲ್ಲ ಇನ್ನೂ ವಿರೋದಿಸುವುದಿಲ್ಲ ಆದರೆ ಪರಶುರಾಮನ ಹೆಸರಿನಲ್ಲಿ ಆದ ನಂಬಿಕೆ ದ್ರೋಹಕ್ಕೆ ಶಿಕ್ಷೆ ಆಗುವವರೆಗೆ ಹೋರಾಡುತ್ತೇವೆ ಇನ್ನೂ ಕಾಲ ಮಿಂಚಿಲ್ಲ ನೀವೂ ಬೀದಿಗಿಳಿದು ಹೋರಾಡುವಂತೆ ಮನವಿ ಮಾಡುತ್ತೇನೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page