ಸಿಎಂ ಸಿದ್ದರಾಮಯ್ಯರವರಿಗೆ ಶಾಸಕ ಯಶ್ ಪಾಲ್ ಸುವರ್ಣ ಸಲಹೆ

ಉಡುಪಿ:ನಿವೃತ್ತಿಯ ಅಂಚಿನಲ್ಲಿರುವ ನಿಮಗೆ ನಿಮ್ಮ ಪಕ್ಷದವರೇ ಕಾಲೆಳೆಯುತ್ತಿದ್ದಾರೆ. ಸಿಎಂ ಬದಲಾವಣೆ ವಿಚಾರವಾಗಿ ನಿಮ್ಮ ಪಕ್ಷದವರೇ ಮಾತನಾಡುತ್ತಿದ್ದಾರೆ. ಎಲ್ಲಾ ಕಿರಿಕಿರಿಗಳಿಗೆ ಶ್ರೀಕೃಷ್ಣ ಮಠಕ್ಕೆ ಬಂದು ಶ್ರೀ ಕೃಷ್ಣನ ದರ್ಶನ ಪಡೆದಲ್ಲಿ ಸಮಸ್ಯೆ ಪರಿಹಾರವಾಗಬಹುದು ಎಂದು ಶಾಸಕ ಯಶ್ ಪಾಲ್ ಸುವರ್ಣ ಸಿಎಂ ಸಿದ್ದರಾಮಯ್ಯರವರಿಗೆ ಸಲಹೆ ನೀಡಿದ್ದಾರೆ.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡುವ ಸಂದರ್ಭ, ಸಿಎಂ ರವರಿಗೆ ಶ್ರೀ ಕೃಷ್ಣ ಮುಖ್ಯ ಪ್ರಾಣ ಹಾಗೂ ಗೋವಿನ ದೋಷವಿರಬಹುದು. ಸಿಎಂ ಕೇವಲ ಸಭೆ ಸಮಾರಂಭಗಳಲ್ಲಿ ಭಾಗವಹಿಸಲು ಮಾತ್ರ ಉಡುಪಿಗೆ ಆಗಮಿಸುತ್ತಾರೆ. ಇಷ್ಟರವರೆಗೆ ಕೃಷ್ಣ ಮಠಕ್ಕೆ ಭೇಟಿ ನೀಡಲಿಲ್ಲ. ಆದ್ದರಿಂದ ಶ್ರೀ ಕೃಷ್ಣನ ದರ್ಶನ ಮಾಡಿ ಗೋಮಾತೆಯ ದರ್ಶನ ಪಡೆದಲ್ಲಿ ಸಮಸ್ಯೆ ಬಗೆಹರಿದು ಜೀವನ ಉಜ್ವಲವಾಗಬಹುದು . ನಾನು ಶಾಸಕನ ನೆಲೆಯಲ್ಲಿ ಸಿಎಂ ರವರನ್ನು ಆಹ್ವಾನಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.