ಮಂಡ್ಯ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಧ್ಯಕ್ಷರಾದ ರಜನಿ ರಾಜ್,

ದಿನಾಂಕ:04.08.2025 ರ ಸೋಮವಾರ, ದಿನದಂದು. ಮಂಡ್ಯ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಧ್ಯಕ್ಷರಾದ ಶ್ರೀಮತಿ ರಜಿನಿ ರಾಜ್ ರವರು ಮಂಡ್ಯ ಜಿಲ್ಲೆಯ, ಕೆ.ಆರ್ ಪೇಟೆ ತಾಲೂಕಿನ, ಗುಡುಗನಹಳ್ಳಿ ಗೆ, ಭೇಟಿ ನೀಡಿದ್ದರು.
ಆ ಗ್ರಾಮದ 63 ವರ್ಷದ ಶ್ರೀಮತಿ ಸುವರ್ಣ ಎಂಬ ಮಹಿಳೆಗೆ, ಅವರ ಪತಿಯ ಅಣ್ಣನಿಂದ, ಬಹಳಷ್ಟು ದೌರ್ಜನ್ಯವಾಗುತ್ತಿದ್ದು , ಪಿತ್ರಾರ್ಜಿತ ಆಸ್ತಿಯಲ್ಲಿ ಬಂದ ಅವರ ಮನೆಯ ವ್ಯಾಪ್ತಿಯಲ್ಲಿ ,ಸ್ನಾನದ ಗೃಹವನ್ನು ಕಟ್ಟೋದಕ್ಕೆ ಹೋದರೆ, ತುಂಬಾ ತೊಂದರೆ & ಅಡ್ಡಿಪಡಿಸುತ್ತಿದ್ದರು..ಈ ಸಂಬಂಧ ನೊಂದ ಮಹಿಳೆ ಹಲವಾರು ಬಾರಿ ಠಾಣೆಗೆ ಹೋಗಿ ತಮ್ಮ ಭಾವನ ಮೇಲೆ ದೂರು ನೀಡಿದ್ದರು ಸಹ ಇವರಿಗೆ ನ್ಯಾಯ ಸಿಕ್ಕಿರಲಿಲ್ಲ , ಇವರ ಭಾಗಕ್ಕೆ ಬಂದಿರುವ ಮರಗಳನ್ನೆಲ್ಲ ಕಟ್ ಮಾಡಿ ತೊಂದರೆ ಕೊಡುತ್ತಿದ್ದರು.
ಕೇಳುವುದಕ್ಕೆ ಹೋದರೆ ಬಹಳಷ್ಟು ಸಾರಿ ದೈಹಿಕ ಹಲ್ಲೆ ಮಾಡಿ ಗಾಯಗೊಳಿಸಿದ್ದರು,ಈ ನೊಂದ ಮಹಿಳೆ , ಶ್ರೀಮತಿ ರಜಿನಿರಾಜ್ ಅವರ ಕಚೇರಿಗೆ ಬಂದು, ದೂರನ್ನು ದಾಖಲಿಸಿದ ಮೇರೆಗೆ. ಸಂಬಂಧಪಟ್ಟ ಠಾಣೆಗೆ ಕರೆ ಮಾಡಿ ಸೂಕ್ತ ಕ್ರಮ ತೆಗೆದುಕೊಂಡು ತೊಂದರೆ ಕೊಡುತ್ತಿರವ ವ್ಯಕ್ತಿ ಗೆ ಕಾನೂನಾತ್ಮಕ ಶಿಕ್ಷೆಗೆ ಗುರಿಪಡಿಸಿ, ಹಾಗೂ ನ್ಯಾಯ ಕೊಡಿಸಲು ಕರೆ ಮಾಡಿದ್ದು. ಹಾಗೂ ಕೆ.ಆರ್ ಪೇಟೆ, ತಹಸೀಲ್ದಾರ್ ರವರನ್ನು ಖುದ್ದಾಗಿ ಭೇಟಿ ಮಾಡಿ ಮಾಹಿತಿ ನೀಡಿದ್ದು,ಗುಡಗನಹಳ್ಳಿ ಗ್ರಾಮದ ಪಿಡಿಒ ರವರಿಗೆ ಈ ಮಹಿಳೆಯ ಭೂಮಿಯನ್ನು ಅಳತೆ ಮಾಡಿಸಿ, ಸ್ನಾನದ ಗೃಹ ನಿರ್ಮಾಣ ಮಾಡಿಸಿಕೊಡಬೇಕೆಂದು.. ಕೆ .ಆರ್. ಪೇಟೆ ತಹಸೀಲ್ದಾರ್ ಅಶೋಕ್ ಸರ್,ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ಶ್ರೀಮತಿ ರಜಿನಿರಾಜ್ ಅವರು, ಪೋಲಿಸ್ ಇಲಾಖೆಯವರ ಜೊತೆಗೂಡಿ ಹಾಗೂ ಕೆ ಆರ್. ಪೇಟೆ. ಮಹಿಳಾ ಮಕ್ಕಳ ಸಹಾಯಕಿ ಶ್ರೀಮತಿ ಪದ್ಮ., ಪಿಡಿಓ ಜೊತೆಗೂಡಿ ನ್ಯಾಯವನ್ನು . ಕೊಡಿಸುವಲ್ಲಿ ಯಶಸ್ವಿಯಾದರು, ಕಾರ್ಯ ವೈಖರಿ ಮೆಚ್ಚಿ ಬಹಳಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದರು.