
ಇಸ್ಲಾಮಾಬಾದ್: ಭಾರತದ ಪ್ರತೀಕಾರ ದಾಳಿಯಿಂದ ಅತ್ತ ತಿನ್ನಲು ಅನ್ನವಿಲ್ಲದೆ, ಇತ್ತ ಕುಡಿಯಲು ನೀರಿಲ್ಲದೆ ಹತಾಶ ಸ್ಥಿತಿಯಲ್ಲಿರುವ ಪಾಕಿಸ್ತಾನದ ಅಧಿಕಾರಿಗಳು ಇದೀಗ ಭಾರತೀಯರ ಉಸಿರು ನಿಲ್ಲಿಸುವ ಕುರಿತು ಮಾತನಾಡಿ ನಾಲಿಗೆ ಹರಿಬಿಟ್ಟಿದ್ದಾರೆ.
ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ನ ಅಧಿಕಾರಿ ಅಹ್ಮದ್ ಷರೀಫ್ ಚೌಧರಿ ದೊಡ್ಡದಾಗಿ ಭಾಷಣ ಮಾಡಿದ್ದು, ಭಾರತೀಯರ ಸಾಮೂಹಿಕ ಹತ್ಯೆಗೆ ಕರೆ ನೀಡಿದ್ದಾರೆ. ನೀವು ನಮ್ಮ ನೀರು ನಿಲ್ಲಿಸಿದರೆ ನಾವು ನಿಮ್ಮ ಉಸಿರೇ ನಿಲ್ಲಿಸುತ್ತೇವೆ ಎಂದು ಧಮ್ಕಿ ಹಾಕಿದ್ದಾರೆ.
ಪಹಲ್ಗಾಮ್ ದಾಳಿ ಬಳಿಕ ಭಾರತ ಸಿಂಧೂ ನದಿ ನೀರನ್ನು ತಡೆಹಿಡಿದಿದ್ದು ಇದರಿಂದ ಕೋಪಗೊಂಡ ಪಾಕಿಸ್ತಾನ ಭಾರತೀಯರ ವಿರುದ್ಧ ಈ ರೀತಿ ನಾಲಿಗೆ ಹರಿಬಿಟ್ಟಿದೆ.






















































