
ದಿನಾಂಕ 27-08-2025 ರಿಂದ 28-08-2025 ರವರೆಗೆ ಬೈಲೂರಿನ ಗಾಂಧಿ ಸ್ಮಾರಕ ಭವನದಲ್ಲಿ 45ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯಲಿದೆ.
ದಿನಾಂಕ 27.08-2025ನೇ ಬುಧವಾರದಂದು ದಿ| ಶ್ರೀಮತಿ ಮೇಚು ನಾರಾಯಣ ಪೂಜಾರಿ ಕಾಂತನಮಜಲ್ ಕಣಂಜಾರು ವೇದಿಕೆಯಲ್ಲಿ ಬೆಳಗ್ಗೆ 9 ಗಂಟೆಗೆ ವಿಗ್ರಹವನ್ನು ಮೆರವಣಿಗೆಯಿಂದ ಗಾಂಧಿ ಸ್ಮಾರಕ ಭವನಕ್ಕೆ ತರುವುದು. 10 ಗಂಟೆಗೆ ಪ್ರತಿಷ್ಠೆ, ಗಣ ಹೋಮ, ಮಂಗಳಾರತಿ ನಡೆಯಲಿದ್ದು ಮಧ್ಯಾಹ್ನ 2 ಗಂಟೆಯಿಂದ ಮಕ್ಕಳಿಗೆ ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆ, ಭಕ್ತಿಗೀತೆ, ಪುರುಷರಿಗೆ ಹಾಗೂ ಮಹಿಳೆಯರಿಗೆ ಆಟೋ ಸ್ಪರ್ಧೆಗಳು ನಡೆಯಲಿದೆ.

ಸಂಜೆ 5:30 ರಿಂದ ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ ಬೈಲೂರಿನ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು ಸಂಜೆ 6 ಗಂಟೆಗೆ ರಂಗ ಪೂಜೆ ನಡೆಯಲಿದೆ. ರಾತ್ರಿ ಎಂಟು ಗಂಟೆಗೆ ರಂಗ ತರಂಗ ಕಲಾವಿದರು ಕಾಪು ಇವರಿಂದ ಸಂದೀಪ್ ಶೆಟ್ಟಿ ಮಾಣಿಬೆಟ್ಟು ರಚಿಸಿರುವ ಪ್ರಸನ್ನ ಶೆಟ್ಟಿ ಬೈಲೂರು ನಿರ್ದೇಶನದ “ಕುಟ್ಯಣ್ಣನ ಕುಟುಂಬ” ಎಂಬ ನಾಟಕ ನಡೆಯಲಿದೆ.
ದಿನಾಂಕ 28 8 2025ನೇ ಗುರುವಾರದಂದು ಮಧ್ಯಾಹ್ನ 12:30ಕ್ಕೆ ಮಹಾಪೂಜೆ, ಮಂಗಳಾರತಿ 1:00 ಗಂಟೆಗೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಪ್ರಕಾಶ್ ಮಾಧವನ್ ಹಾಗೂ ರೂಪಪ್ರಕಾಶ್ ಮಾಧವನ್ ಸಾರಥ್ಯದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಹೋಲ್ಡರ್ ಯಶವಂತ್ ಎಂ.ಜಿ ಇವರಿಂದ “ಸ್ಟಾರ್ ಧಮಾಕ” ಸಂಗೀತ ರಸಮಂಜರಿ ಆರ್ಯನ್ ಡ್ಯಾನ್ಸ್ ಸ್ಟುಡಿಯೋ ತಂಡದಿಂದ “ಅಮೋಘ ನೃತ್ಯ ಪ್ರದರ್ಶನ” ನಡೆಯಲಿದೆ. ಸಂಜೆ 6 ಗಂಟೆಗೆ ವಿಸರ್ಜನಾ ಮಹಾಪೂಜೆ, ಮಂಗಳಾರತಿ, ಗಣಪತಿ ವಿಸರ್ಜನಾ ಮೆರವಣಿಗೆ ನಡೆಯಲಿದೆ.

