
ಕಾರ್ಕಳ ತಾಲೂಕಿನ ನೀರೆ ಗ್ರಾಮದ ಜಡ್ಡಿನಂಗಡಿ ಬಳಿ ಫೆ.26ರಂದು ನಡೆದ ಅಪಘಾತಕ್ಕೆ ಕಾರಣವಾದ ಆರೋಪಿಗಳ ಬಂಧನ ಇನ್ನೂ ಸಾಧ್ಯವಾಗಿಲ್ಲ.ಅಪರಿಚಿತ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ರಾಜೇಶ್ ಶೆಟ್ಟಿ (35) ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ.
ಆದರೆ ಅವರಿಗೆ ಅಪ ಘಾತವೆಸಗಿದ್ದ ಕಾರಿನ ಚಿತ್ರಣ ಗುಡ್ಡೆ ಯಂಗಡಿ ಬಳಿಯ ಪೆಟ್ರೋಲ್ ಬಂಕ್ನ ಸಿಸಿ ಕ್ಯಾಮೆರಾದಲ್ಲಿ ಪತ್ತೆ ಹಚ್ಚಲಾಗಿತ್ತು.ಅಪಘಾತವೆಸಗಿ ಪರಾರಿಯಾಗಿರುವ ಕಾರಿನ ಮುಂಭಾಗ ಕೂಡ ಜಖಂ ಗೊಂಡಿತ್ತು. ಆದರೆ ಈ ಕಾರಿನ ಮಾಲೀಕ ಹಾಗೂ ಆ ಸಂದರ್ಭ ಚಲಾಯಿಸಿದವರ ಮಾಹಿತಿ ಪತ್ತೆ ಹಚ್ಚುವಲ್ಲಿ ವಿಳಂಬ ವಾಗಿದೆ. ಇತ್ತ ರಾಜೇಶ್ ಶೆಟ್ಟಿ ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದು, ಚೇತರಿಸಿಕೊಳ್ಳಲಾರದಷ್ಟು ಗಾಯ ಗೊಂಡಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.






















































