32.3 C
Udupi
Saturday, March 28, 2026
spot_img
spot_img
HomeBlogನೀಟ್‌ ಫಲಿತಾಂಶ ಹಾಗೂ ಕೌನ್ಸೆಲಿಂಗ್‌ ವೇಳಾಪಟ್ಟಿ ಪ್ರಕಟಗೊಂಡ ಬಳಿಕ ಸೀಟು ಹಂಚಿಕೆಗೆ ಏಕೀಕೃತ ಕೌನ್ಸೆಲಿಂಗ್: ಸಚಿವ...

ನೀಟ್‌ ಫಲಿತಾಂಶ ಹಾಗೂ ಕೌನ್ಸೆಲಿಂಗ್‌ ವೇಳಾಪಟ್ಟಿ ಪ್ರಕಟಗೊಂಡ ಬಳಿಕ ಸೀಟು ಹಂಚಿಕೆಗೆ ಏಕೀಕೃತ ಕೌನ್ಸೆಲಿಂಗ್: ಸಚಿವ ಡಾ.ಎಂ.ಸಿ.ಸುಧಾಕರ್‌

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ನೀಟ್‌ ಫಲಿತಾಂಶ ಹಾಗೂ ಕೌನ್ಸೆಲಿಂಗ್‌ ವೇಳಾಪಟ್ಟಿ ಪ್ರಕಟಗೊಂಡ ಬಳಿಕ ಎಂಜಿನಿಯರಿಂಗ್‌, ವೈದ್ಯಕೀಯ ಸೇರಿ ಎಲ್ಲ ವೃತ್ತಿಪರ ಕೋರ್ಸುಗಳ ಸೀಟು ಹಂಚಿಕೆಗೂ ಏಕೀಕೃತ ಕೌನ್ಸೆಲಿಂಗ್‌ ನಡೆಸಲಾಗುವುದು ಎಂದು ತಿಳಿಸಿದರು.

ಕೌನ್ಸೆಲಿಂಗ್‌ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧವಿದೆ. ಆದರೆ, ಯುಜಿ ನೀಟ್ ಆಧಾರದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳ ಪ್ರವೇಶಕ್ಕೆ ಸೀಟು ಹಂಚಿಕೆ ಮಾಡಬೇಕಾಗುತ್ತದೆ. ನಾಟಾ-2025 ಅಂಕಗಳ ಆಧಾರದಲ್ಲಿ ಆರ್ಕಿಟೆಕ್ಚರ್ ಸೀಟುಗಳನ್ನು ನೀಡಲಾಗುತ್ತದೆ. ಹಾಗಾಗಿ ನೀಟ್‌, ನಾಟಾ ಫಲಿತಾಂಶ ಪ್ರಕಟಗೊಂಡು ಕೌನ್ಸೆಲಿಂಗ್‌ ವೇಳಾಪಟ್ಟಿ ಹೊರಬರಬೇಕು. ಜೊತೆಗೆ ಈ ಸಾಲಿನಲ್ಲಿ ಹಂಚಿಕೆಗೆ ಲಭ್ಯ ಸೀಟುಗಳ ಪಟ್ಟಿಯೂ ಸಂಬಂಧಿಸಿದ ಪ್ರತಿ ಇಲಾಖೆಗಳಿಂದ ಕೆಇಎಗೆ ಸಲ್ಲಿಕೆಯಾಗಬೇಕು. ಆ ಬಳಿಕ ಏಕೀಕೃತ ಕೌನ್ಸೆಲಿಂಗ್‌ ಮೂಲಕ ಎಲ್ಲ ಕೋರ್ಸುಗಳ ಸೀಟು ಹಂಚಿಕೆ ನಡೆಸಲಾಗುವುದು ಎಂದು ತಿಳಿಸಿದರು.

ಸಿಇಟಿ ಫಲಿತಾಂಶ ಪ್ರಕಟಿಸುವುದಕ್ಕೂ ಮುನ್ನ ಈ ಬಾರಿ ಎಲ್ಲ ವಿದ್ಯಾರ್ಥಿಗಳ ದಾಖಲೆಗಳನ್ನು ಆನ್‌ಲೈನ್‌ ಮೂಲಕ ಪರಿಶೀಲಿಸಲಾಗಿದ್ದು ಆನ್‌ಲೈನ್‌ ಪರಿಶೀಲನೆ ಆಗದಿರುವ ದಾಖಲೆಗಳನ್ನು ಆಯಾ ಪಿಯು ಕಾಲೇಜುಗಳಲ್ಲೇ ಪರಿಶೀಲಿಸಲಾಗಿದೆ. ಆಪ್ಷನ್‌ ಎಂಟ್ರಿಗೆ ದತ್ತಾಂಶ ಸಿದ್ಧವಾಗಿದ್ದು ಇನ್ನು ಸಿಇಟಿ ಅಭ್ಯರ್ಥಿಗಳ ಪ್ರಶ್ನೆ, ಗೊಂದಲ, ಸಮಸ್ಯೆಗಳನ್ನು ಪರಿಹರಿಸಲು ಕೆಇಎ ಕಾಲ್‌ಸೆಂಟರ್‌ ಅನ್ನು 10 ಫೋನ್‌ ಲೈನ್‌ಗಳ ಅಳವಡಿಕೆ ಮೂಲಕ ಉನ್ನತೀಕರಿಸಲಾಗಿದೆ. ಇನ್ನು ಮುಂದೆ ವಾರದ ಎಲ್ಲಾ ದಿನ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಇದು ಕಾರ್ಯನಿರ್ವಹಿಸಲಿದೆ ಎಂದು ಸಚಿವರು ವಿವರಣೆ ನೀಡಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page