25.1 C
Udupi
Monday, February 16, 2026
spot_img
spot_img
HomeBlogನಿವೃತ್ತ ಯೋಧ ರಮೇಶ್ ಕುಲಾಲರಿಗೆ, ಹುಟ್ಟೂರ ಅಭಿನಂದನಾ ಕಾರ್ಯಕ್ರಮ

ನಿವೃತ್ತ ಯೋಧ ರಮೇಶ್ ಕುಲಾಲರಿಗೆ, ಹುಟ್ಟೂರ ಅಭಿನಂದನಾ ಕಾರ್ಯಕ್ರಮ

spot_imgspot_img

ಪೆರ್ಡೂರು : ದೂಪದಕಟ್ಟೆ ಬೈರಂಪಳ್ಳಿಯ ನಿವಾಸಿ, ಭಾರತೀಯ ಸೇನೆಯಲ್ಲಿ ಸುದೀರ್ಘ ವರ್ಷದ ಸೇವೆ ಮಾಡಿ ನಿವೃತ್ತಿ ಹೊಂದಿದ ಯೋಧ ರಮೇಶ್ ಕುಲಾಲರಿಗೆ ಹುಟ್ಟೂರ ಅಭಿನಂದನಾ ಕಾರ್ಯಕ್ರಮವು ಶ್ರೀ ವಾಸುಕಿ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿ, ದೂಪದ ಕಟ್ಟೆ ಪೆರ್ಡೂರು ಮುಂದಾಳತ್ವದಲ್ಲಿ ಗ್ರಾಮಸ್ಥರ ಉಪಸ್ಥಿತಿಯಲ್ಲಿ, ರಮೇಶ್ ಕುಲಾಲರ ಅಭಿಮಾನಿ ಬಳಗದಿಂದ ಭವ್ಯ ಮೆರವಣಿಗೆಯಲ್ಲಿ ಸಾಗಿ ಬಂದು ಪೆರ್ಡೂರು ದೂಪದ ಕಟ್ಟೆ ಬೈರಂಪಳ್ಳಿಯಲ್ಲಿ ಗುರುವಾರ ಜರಗಿತು.

ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಕಾಪು ಕ್ಷೇತ್ರ ದ ಮಾನ್ಯ ಶಾಸಕರು ಗುರ್ಮೆ ಸುರೇಶ್ ಶೆಟ್ಟಿ, ಬೈರಂಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ಪ್ರಸಾದ್ ಮಲ್ಯ,ಉಪಾಧ್ಯಕ್ಷರು ಶ್ರೀಮತಿ ಅಮ್ಮಣ್ಣಿ ಶೆಟ್ಟಿ,ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿ ಅಧ್ಯಕ್ಷರು ದಿನೇಶ್ ಪೆರ್ಜೆ,ಭೈರಂಪಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಜಿಯಾನಂದ ಹೆಗ್ಡೆ,ಕುಂಬಾರರ ಗುಡಿ ಕೈಗಾರಿಕಾ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಸಂತೋಷ್ ಕುಲಾಲ್ ಪಕ್ಕಾಲು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೂಪದಕಟ್ಟೆಯ ಮುಖ್ಯೋಪಾಧ್ಯಾಯರು ಗೋಪಾಲ ನಾಯ್ಕ್,, ಜಿಲ್ಲಾ ಬಿಜೆಪಿ ಅಧ್ಯಕ್ಷರು ಕುತ್ಯಾರು ನವೀನ್ ಶೆಟ್ಟಿ, ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷರು ಕಾಳು ಕುಲಾಲ್, ನಾನಿಲ್ತಾರು ಕುಲಾಲ ಸಂಘದ ಅಧ್ಯಕ್ಷರು ಜಯರಾಮ ಕುಲಾಲ್ ಅಗ್ಗರಟ್ಟ,ದೀಪಕ್ ಬೆಳ್ಮಣ್, ರಾಮ ಕುಲಾಲ್ ಪಕ್ಕಾಲು,ಗಣೇಶ್ ಕುಲಾಲ್ ಪಕ್ಕಾಲು, ಕೃಷ್ಣ ಕುಲಾಲ್ ಪೆರ್ಡೂರು, ರೇಷ್ಮಾ ಶೆಟ್ಟಿ ಇನ್ನ ಗೋವಿಂದ ಕುಲಾಲ್ ದೂಪದಕಟ್ಟೆ, ಸುರೇಶ್ ಡಿ ಕುಲಾಲ್, ಸುಕೇಶ್ ಶೆಟ್ಟಿ, ನಾಗೇಶ್ ಕುಲಾಲ್ ಸೇರಿದಂತೆ ರಮೇಶ್ ಕುಲಾಲ್ ಅಭಿಮಾನಿ ಬಳಗದ ಎಲ್ಲರೂ ಉಪಸ್ಥಿತರಿದ್ದರು… ಸಂಘಟಕ ಸುಭಾಸ್ ಶೆಟ್ಟಿ ಎಲ್ಲರನ್ನು ಸ್ವಾಗತಿಸಿ, ಸುಧಾಕರ್ ಕುಲಾಲ್ ಪಟ್ಲ ವಂದಿಸಿದರು.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page