
ಚಿಕ್ಕಮಗಳೂರು: ಪ್ರವಾಸಿ ತಾಣ ಎತ್ತಿನ ಭುಜ ಚಾರಣಕ್ಕೆ ಮಳೆಯ ಹಿನ್ನೆಲೆ ಜುಲೈ 1 ರಿಂದ ಜುಲೈ 31 ರವರೆಗೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ ಎಂದು ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.
ಎತ್ತಿನ ಭುಜಕ್ಕೆ ನಾನಾ ಕಡೆಯಿಂದ ಪ್ರವಾಸಿಗರು ಆಗಮಿಸುತ್ತಿದ್ದು, ಮಳೆಯ ಕಾರಣ ಅಲ್ಲಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆ ಇದ್ದು, ಯಾವುದೇ ರೀತಿಯ ಅನಾಹುತ ಸಂಭವಿಸಿದ್ದಲ್ಲಿ ರಕ್ಷಣಾ ಕಾರ್ಯ ಕಷ್ಟ ಸಾಧ್ಯ, ಇನ್ನು ಸ್ಥಳೀಯರು ಕೂಡ ಈ ಬಗ್ಗೆ ಒತ್ತಾಯಿಸಿದ್ದು, ಅವಘಡಗಳು ಸಂಭವಿಸಿದ್ದಲ್ಲಿ ವಾಹನ ಸಂಪರ್ಕ ಇಲ್ಲದ ಕಾರಣ ರಕ್ಷಣಾ ಕಾರ್ಯ ಕಷ್ಟಕರವಾಗಲಿದೆ. ಆದ್ದರಿಂದ ಪ್ರವಾಸಿಗರ ಹಿತ ದೃಷ್ಟಿಯಿಂದ ತಾತ್ಕಾಲಿಕವಾಗಿ ಚಾರಣಕ್ಕೆ ಬ್ರೇಕ್ ಹಾಕಲಾಗಿದೆ ಎಂದು ಇಲಾಖೆ ತಿಳಿಸಿದೆ.