
ಕಾರ್ಕಳ : ಮೇ 21 ರ ಮಧ್ಯಾಹ್ನ 2.30ರ ವೇಳೆಗೆ ಗುಡಗು ಸಿಡಿಲು ಸಹಿತ ಸುರಿದ ಬಾರಿ ಮಳೆಗೆ ನಿಟ್ಟೆ ಗ್ರಾಮದ ಕಲ್ಲಂಬಾಡಿ ಪದವಿನ ಕುಟ್ಟಿಮೇಸ್ತ್ರಿ ಎಂಬವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ಸಂದರ್ಭ ಕುಟ್ಟಿಯವರ ಮನೆಯ ಸ್ವಿಚ್ ಬೋರ್ಡ್‌ಗೆ ಸಿಡಿಲು ಬಡಿದಿದೆ. ಪರಿಣಾಮವಾಗಿ ಅಂದಾಜು 50,000 ರೂ.ಯಷ್ಟು ನಷ್ಟ ಉಂಟಾಗಿದೆ.