
ಕಾರ್ಕಳ:ಇಂದು ನಿಟ್ಟೆ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ (ರಿ.) ಯ ವಾರ್ಷಿಕ ಮಹಾ ಸಭೆಯು ಅಧ್ಯಕ್ಷರಾದ ಹರ್ಷವರ್ಧನ್ ನಿಟ್ಟೆ ಯವರ ಅಧ್ಯಕ್ಷತೆಯಲ್ಲಿ ನಿಟ್ಟೆಯ ಕಿರಣ್ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು.
ನಿಟ್ಟೆ ಸಂಘದ ಉಪ ಸಮಿತಿಯಾಗಿರುವ ವಿಶ್ವಕರ್ಮ ಯುವ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಪ್ರದೀಪ್ ಆಚಾರ್ಯ ಪರಪ್ಪಾಡಿ ಆಯ್ಕೆಯಾದರು, ಕಾರ್ಯದರ್ಶಿಯಾಗಿ ಪ್ರದೀಪ್ ಆಚಾರ್ಯ ಕೆಮ್ಮಣ್ಣು ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಸುದೀರ್ ಆಚಾರ್ಯ ಕಲ್ಯಾ,
ಜೊತೆಕಾರ್ಯದರ್ಶಿಯಾಗಿ ಪ್ರವೀಣ್ ಆಚಾರ್ಯ ಕಲ್ಯಾ ಹಾಗೂ ನಾಗರಾಜ್ ಆಚಾರ್ಯ ಕಲ್ಯಾ
ಕೋಶಾಧಿಕಾರಿಯಾಗಿ ಪ್ರಸಾದ್ ಆಚಾರ್ಯ ಬರಂಗ ಆಯ್ಕೆಯಾದರು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ
ಪ್ರವೀಣ್ ಆಚಾರ್ಯ ಪರಪಾಡಿ, ಉಮೇಶ್ ಆಚಾರ್ಯ ಪರಪಾಡಿ, ಮುರಳಿಧರ್ ಆಚಾರ್ಯ ತಾನದಗುಡ್ಡೆ, ಸತೀಶ್ ಆಚಾರ್ಯ ಕಲ್ಯಾ, ನಿತೀನ್ ಆಚಾರ್ಯ ಕೆಮ್ಮಣ್ಣು, ನಾಗೇಶ್ ಆಚಾರ್ಯ ಕಲ್ಯಾ, ಸಾಥ್ವಿಕ್ ಆಚಾರ್ಯ ನಿಟ್ಟೆ, ಹೃತಿಕ್ ಆಚಾರ್ಯ ದೂಪದಕಟ್ಟೆ, ಗುರು ಪ್ರಸಾದ್ ಆಚಾರ್ಯ ಜೊಗಲ್ ಬೆಟ್ಟು, ಅನೂಪ್ ಆಚಾರ್ಯ ನಿಟ್ಟೆ, ಶ್ರೀಕಾಂತ ಆಚಾರ್ಯ ಕೆಮ್ಮಣ್ಣು ಆಯ್ಕೆಯಾದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಂಘದ ಗೌರವಾಧ್ಯಕ್ಷರಾದ ವಿಶ್ವನಾಥ ಆಚಾರ್ಯ, ಉಪಾಧ್ಯಕ್ಷ ಈಶ್ವರ್ ಬಡಿಗೇರ, ಕಾರ್ಯದರ್ಶಿ ಶ್ರೀಧರ್ ಆಚಾರ್ಯ ಕೆಮ್ಮಣ್ಣು, ದಿವಾಕರ ಆಚಾರ್ಯ ಕೆಮ್ಮಣ್ಣು, ಕೋಶಾಧಿಕಾರಿ ಜಯಾನಂದ ಆಚಾರ್ಯ ನಿಟ್ಟೆ ಹಾಗೂ ಮಹಿಳಾ ಸಮಿತಿಯ ಅಧ್ಯಕ್ಷರಾದ ವತ್ಸಲಾ ಉಮೇಶ್ ಆಚಾರ್ಯ ನಿಟ್ಟೆ, ಪದಾಧಿಕಾರಿಗಳಾದ ಉದಯ ಸುಧಾಕರ ಆಚಾರ್ಯ, ವೀಣಾ ದಿವಾಕರ ಆಚಾರ್ಯ, ಸುಮಿತ್ರಾ ಲಕ್ಷ್ಮಣ ಆಚಾರ್ಯ, ಆಶಾ ಜಯಾನಂದ ಆಚಾರ್ಯ ಮತ್ತಿತರರು ಹಾಗೂ ಮೂರೂ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.