“ಮುದ್ದು ಮಕ್ಕಳ ಖುಷಿಯಲ್ಲಿ ನಮ್ಮ ಪಾಲು” ಎಂಬ ಆಶಯದೊಂದಿಗೆ, ಅದ್ದೂರಿ ಕ್ರೀಡಾ ಹಾಗೂ ಸಾಂಸ್ಕೃತಿಕ ಮಹೋತ್ಸವ

ಕಾರ್ಕಳ: ಡಿಸೆಂಬರ್ 28, 2025ರಂದು ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ.) ಕರ್ನಾಟಕ ಇವರ ನೇತೃತ್ವದಲ್ಲಿ ಗೋವಿಂದೂರು ಶ್ರೀ ಅನಂತಮತಿ ಶಾಲೆಯ ಹಳೆ ವಿದ್ಯಾರ್ಥಿ ಸಂಘ ಮತ್ತು ಯರ್ಲಪಾಡಿ ಯುವಕ ಮಂಡಲ (ರಿ.) ಇದರ ಸಹಕಾರದೊಂದಿಗೆ ‘ ಕರಕರಿ ಫ್ರೆಂಡ್ಸ್ ಸಂಭ್ರಮ ಮತ್ತು ಸಾಧಕರಿಗೆ ಸನ್ಮಾನ’ ಕಾರ್ಯಕ್ರಮ ನಡೆಯಲಿದೆ.

ಗೋವಿಂದೂರು ಶ್ರೀ ಅನಂತಮತಿ ಶಾಲಾ ಮೈದಾನದಲ್ಲಿ “ಮುದ್ದು ಮಕ್ಕಳ ಖುಷಿಯಲ್ಲಿ ನಮ್ಮ ಪಾಲು” ಎಂಬ ಆಶಯದೊಂದಿಗೆ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ಶಾಸಕ ವಿ. ಸುನಿಲ್ ಕುಮಾರ್ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. ಸಾಯಂಕಾಲ ಗಂಟೆ 7:00ರಿಂದ ಅಂಗನವಾಡಿ ಪುಟಾಣಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ,ರಾತ್ರಿ 08:00 ರಿಂದ ಸಭಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ನಡೆಯಲಿದೆ. ರಾತ್ರಿ 9:30 ರಿಂದ ‘ನಾಲಾಯಿ ಮಗುರುಜಿ’ ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ.
ಪುರುಷ ಹಾಗೂ ಮಹಿಳೆಯರ ಆಟೋಟ ಸ್ಪರ್ಧೆಗಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ವಿಜೇತರಿಗೆ ನಗದು ಬಹುಮಾನ ಹಾಗೂ ಟ್ರೋಫಿಗಳನ್ನು ಪ್ರಧಾನ ಮಾಡಲಾಗುವುದು. ಈ ಸಮಾರಂಭಕ್ಕೆ ಸರ್ವರೂ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ಆಹ್ವಾನಿಸಿದ್ದಾರೆ.






