
ನಲ್ಲೂರು ಗೋ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಶಿವಪ್ರಸಾದ್ ಎಂಬಾತ ಹಿಂದೂ ಸಂಘಟನೆ ಕಾರ್ಯಕರ್ತ ಆಗಿರುವುದಿಲ್ಲ, ಮತ್ತು ಯಾವುದೇ ಪರಿವಾರ ಸಂಘಟನೆಯಲ್ಲಿಯೂ ಇದುವರೆಗೆ ಗುರುತಿಸಿಕೊಂಡಿಲ್ಲ. ಇದರ ಬಗ್ಗೆ ಸ್ಪಷ್ಟನೆ ನೀಡುವ ಅಗತ್ಯವೂ ಹಿಂದೂ ಸಂಘಟನೆಗಳಿಗೆ ಇಲ್ಲ ಆದರೆ ಸತ್ಯಾಸತ್ಯತೆಯನ್ನು ತಿಳಿದಿದ್ದರೂ ಕೂಡ ಕೆಲವು ಮಾಧ್ಯಮಗಳು ಸುಳ್ಳು ಸುದ್ದಿ ಪ್ರಕಟಿಸುತ್ತಿರುವುದು ಸಮಾಜದಲ್ಲಿ ಗೊಂದಲಗಳಿಗೆ ಕಾರಣವಾಗುತ್ತದೆ. ಇದನ್ನು ಹಿಂದು ಜಾಗರಣ ವೇದಿಕೆ ಕಾರ್ಕಳ ತೀವ್ರವಾಗಿ ಖಂಡಿಸುತ್ತದೆ. ಮಾಧ್ಯಮಗಳು ಸಮಾಜದ ಉನ್ನತಿಗೆ ಸಹಕರಿಸಬೇಕೆ ಹೊರತು ಸಮಾಜದ ಸ್ವಾಸ್ತ್ಯ ಕದಡುವ ಕೆಲಸ ಮಾಡಬಾರದು. ಇದೇ ರೀತಿ ಮುಂದುವರಿದಲ್ಲಿ ಕಾನೂನು ಕ್ರಮದ ಎಚ್ಚರಿಕೆ ನೀಡುತಿದ್ದೇವೆ.





