
ಎಸ್ ವಿ ಟಿ ಶಿಕ್ಷಣ ಸಂಸ್ಥೆಗಳು, ಇಂಟರ್ಯಾಕ್ಟ್ ಕ್ಲಬ್,ರೋಟರಿ ಕ್ಲಬ್ ಕಾರ್ಕಳದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸೈನಿಕರು ಭಾವ ಜೀವಿಗಳು, ನಚೀಕೇತ್, ಸೌರಭ್‌ಕಾಲಿಯಾರಂತಹ ಮೊದಲಾದ ವೀರಯೋಧರ ಬಲಿದಾನದ ಪ್ರತಿಫಲವಾಗಿ ಇಂದಿನ ಭಾರತ ಭವ್ಯವಾಗಿದೆ. ಕಾರ್ಗಿಲ್ ಯುದ್ಧವಲ್ಲ ಅದೊಂದು ಕಾರ್ಯಚರಣೆ.
ಯಾಕೆ ಭಾರತಕ್ಕೆ ಕಾರ್ಗಿಲ್ ಮುಖ್ಯವೆಂದರೆ 527 ಸೈನಿಕರು ತಮ್ಮ ಯಶಸ್ವಿ ಕಾರ್ಯಚರಣೆಯಿಂದ ಭಾರತಕ್ಕೆ ಜಯ ತಂದುಕೊಟ್ಟು ಹುತಾತ್ಮರಾದರು. ಇಂದು ಆ ಕಾರ್ಯಚರಣೆಯಲ್ಲಿ ಮಡಿದ ಅಷ್ಟೂ ಸೈನಿಕರನ್ನು ಸ್ಮರಿಸಿಕೊಳ್ಳುವುದು ಅತೀ ಮುಖ್ಯ. ನಮ್ಮನ್ನು ರಕ್ಷಣೆ ಮಾಡುತ್ತಿರುವ ಸೈನಿಕರನ್ನು ಪ್ರತೀಕ್ಷಣ ಸ್ಮರಿಸಬೇಕುಎಂಬುದಾಗಿ ನಿವೃತ್ತ ಸೇನಾಧಿಕಾರಿ ಹಾಗೂ ಕರ್ನಾಟಕ ಸರ್ಕಾರದ ನಿಕಟ ಪೂರ್ವ ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಭಿಪ್ರಾಯ ಪಟ್ಟರು. ಇಲ್ಲಿಯ ತನಕ ಹುತಾತ್ಮರಾದ ಎಲ್ಲಾ ಸೈನಿಕರಿಗೂ ಎದೆಗೆ ಗುಂಡು ಬಿದ್ದಿದೆಯೇ ವಿನಃ ಬೆನ್ನಿಗಲ್ಲ. ಅಷ್ಟಿದ್ದರೂ ದೇಶಕ್ಕಾಗಿ ಬದುಕಬೇಕು ಎಂಬ ಭಾವುಕತೆ ಸೈನಿಕರದ್ದು.
ಅವರು ದೇಶದ ರಕ್ಷಣೆ ಕಣ್ಣ ಮುಂದೆ ಬಂದರೆ ಸದಾ ಬಲಿದಾನಕ್ಕೆ ಮುಂದಾಗುತ್ತಾರೆ. ಬಲಿದಾನಗೈದ ವೀರಯೋಧರ ಕನಸುಗಳನ್ನು ಹೊತ್ತ ಭೂಮಿ ಇದು ಕಾರ್ಗಿಲ್ ಎಂದಿಗೂ ಭಾರತದ ಭಾಗ ಅಲ್ಲಿ ಮಡಿದ ಯೋಧರ ಪರಿಶ್ರಮ ನಮ್ಮ ನೆಮ್ಮದಿಯ ನಿದ್ರೆಗೆ ಕಾರಣ. ಆದರೆ ಇಂದು ನಾವುಗಳು ಜಾತಿ ಮತ ಭಾಷೆ ಇತ್ಯಾದಿ ಬಂಧನಗಳಿಗೆ ಒಳಗಾಗಿದ್ದೇವೆ. ಅದರಿಂದ ಹೊರಬಂದು ನಾವೆಲ್ಲಾಒಂದೇ, ನಾವೆಲ್ಲಾ ಭಾರತೀಯರು ಎನ್ನುವ ಹೆಮ್ಮೆ ನಮಗಿರಬೇಕು. ಜೀವನದಲ್ಲಿ ಗುರಿಯ ಸ್ಪಷ್ಟತೆ ಇದ್ದರೆ ಎಂತಹ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬಹುದು ಎಂದರು.
ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾಗವಹಿಸಿದ ಯೋಧ ಚಂದಪ್ಪ ಡಿ.ಎಸ್ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಾ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಶತ್ರುಗಳ ಜೊತೆಗೆ ಹೋರಾಟ ಮಾಡಿದ ಪ್ರತಿ ಕ್ಷಣವನ್ನು ಮೇಲುಕು ಹಾಕಿ ಮಾತನಾಡುತ್ತಾ,ಯೋಧರ ಆದರ್ಶಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದಿನ ಈ ಕಾರ್ಗಿಲ್ ವಿಜಯ ಸುಲಭವಾಗಿ ಲಭಿಸಿದ್ದಲ್ಲ ಅದರಲ್ಲಿ ನೂರಾರು ಸೈನಿಕರು ವೀರತನದಿಂದ ಹೋರಾಡಿ ತಮ್ಮ ಬಲಿದಾನ ಮಾಡಿದ್ದಾರೆ. ಇಂದು ನಾವೆಲ್ಲಾ ಈ ಸಂಭ್ರಮಾಚರಣೆ ಮಾಡುತ್ತಿರುವುದು ಅವರಿಗೆ ಸಲ್ಲಿಸುತ್ತಿರುವ ಗೌರವ ಎಂದು ಹೇಳುತ್ತಾ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮದ ಅರಿವನ್ನು ಮೂಡಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಯೋಧ ಚಂದಪ್ಪ ಡಿ ಎಸ್, ಹಾಗೂ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರಿಗೆ ಸನ್ಮಾನಿಸಲಾಯಿತು. ಎಸ್ ವಿ ಟಿ ಸಮೂಹ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು, ಶಿಕ್ಷಕರು,ಉಪನ್ಯಾಸಕರು, ಶಿಕ್ಷಕೇತರ ವೃಂದದವರು ಹಾಗೂ ಎಜ್ಯುಕೇಶನ್ ಟ್ರಸ್ಟ್ ನ ಉಪಾಧ್ಯಕ್ಷರಾದ ಕಾರ್ಕಳ ಕಮಲಾಕ್ಷ ಕಾಮತ್ ಇವರುಗಳು ಸ್ವಯಂ ಪ್ರೇರಣೆಯಿಂದ ನೀಡಿರುವ ನಿಧಿಯನ್ನು ಯೋಧ ಚಂದಪ್ಪ ಡಿ.ಎಸ್ ಅವರಿಗೆ ಹಸ್ತಾಂತರಿಸಲಾಯಿತು. ಕಾರ್ಗಿಲ್ ಕಾರ್ಯಾಚರಣೆಯ ಸಂದರ್ಭದ ಸನ್ನಿವೇಶವನ್ನು ವಿದ್ಯಾರ್ಥಿಗಳಿಗೆ ಪ್ರೊಜೆಕ್ಟರ್ ಮೂಲಕ ಆಂಗ್ಲ ಮಾಧ್ಯಮ ಶಾಲೆಯ ಕಂಪ್ಯೂಟರ್ ಶಿಕ್ಷಕರಾದ ಆಸ್ಟಿನ್ ಅವರು ತೋರ್ಪಡಿಸಿದರು. ಕಾರ್ಯಕ್ರಮದಲ್ಲಿ ಎಸ್ ವಿ ಟಿ ವನಿತಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಮದಾಸ್ ಪ್ರಭು, ಪ್ರೌಢಶಾಲಾ ವಿಭಾಗದ ಹಿರಿಯ ಮುಖ್ಯ ಶಿಕ್ಷಕರಾದ ಯೋಗೇಂದ್ರ ನಾಯಕ್, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥರಾ ಮಾಲಿನಿ.ಕೆ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಸ್ಥರಾದ ಬಂಡಿವಡ್ಡರ್, ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷರಾದ ರೋ |ಇಕ್ಬಾಲ್ ಅಹಮದ್, ಕಾರ್ಯದರ್ಶಿ ರೋ | ಗಣೇಶ್ ಸಾಲಿಯಾನ್ ಉಪಸ್ಥಿತರಿದ್ದರು. ಎಸ್ ವಿ ಎಜ್ಯುಕೇಶನ್ ಟ್ರಸ್ಟ್ ನ ಕೋಶಾಧಿಕಾರಿ ಐ ರವೀಂದ್ರನಾಥ್ ಪೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪನ್ಯಾಸಕರಾದ ಪದ್ಮಪ್ರಭ ಇಂದ್ರ ಪರಿಚಯಿಸಿ ಸ್ವಾಗತಿಸಿದರು. ಇಂಟರ್ಯಾಕ್ಟ್ ಕ್ಲಬ್ ನ ಅಧ್ಯಕ್ಷೆ ಅನ್ವಿತಾ ವಂದಿಸಿದರು. ಅಧ್ಯಾಪಕ ದೇವದಾಸ್ ಕೆರೆಮನೆ ನಿರೂಪಿಸಿದರು.











