
ದಿನಾಂಕ 27.07.2025 ನೇ ಭಾನುವಾರದಂದು ನಮನ ಯುವ ಬಾಂಧವೆರ್ ಹಾಗೂ ಶ್ರೀ ಮಹಾದೇವಿ ಭಜನಾ ಮಂಡಳಿ (ರಿ.) ಕೆಲ್ಲಪುತ್ತಿಗೆ ಇದರ ಹತ್ತನೇ ವರ್ಷದ ಕೆಸರ್ಡ್ ಒಂಜಿ ದಿನ ಕ್ರೀಡಾಕೂಟ ತೆಂಕಾಯಿಬೆಟ್ಟು ಗದ್ದೆಯಲ್ಲಿ ನಡೆಯಲಿದೆ.
ಭಾಸ್ಕರ್ ಎಸ್ ಕೋಟ್ಯಾನ್ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಶಿವರಾಜ್ ಸಾಲ್ಯಾನ್ ಅವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ದಿನೇಶ್ ಶೆಟ್ಟಿ ತಿಮ್ಮೊಟು, ದಿನೇಶ್ ಬಂಗೇರ ಪಾಲಾಜೆ, ಅಶೋಕ್ ಶೆಟ್ಟಿ ಬೇಲೊಟ್ಟು, ಸುಭಾಷ್ಚಂದ್ರ ಚೌಟ, ಗೋಪಾಲ ಪೂಜಾರಿ, ಶ್ರೀನಾಥ್ ಎನ್ ಸುವರ್ಣ, ಭರತ್ ಜೈನ್, ವಿಮಲ ಕುಮಾರ್ ಜೈನ್, ಮೋನಪ್ಪ ಮೂಲ್ಯ, ನಿತಿನ್ ಜೈನ್ ಮಾಸ್ತಿಕಟ್ಟೆ, ಪ್ರದೀಪ್ ಕುಮಾರ್ ವಾಲ್ಪಡಿ ಹಾಗೂ ಮತ್ತೀತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಸ್ಥಳೀಯ ವಿದ್ಯಾರ್ಥಿಗಳಿಗೆ ಮತ್ತು ಕಂಬಳ ಓಟಗಾರರಿಗೆ ಹಾಗೂ ಕೃಷಿಯಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 8:30 ರಿಂದ ಸಂಜೆ 4ರವರೆಗೆ ಆಟೋಟ ಸ್ಪರ್ಧೆಗಳು ನಡೆಯಲಿದ್ದು ಪುರುಷರಿಗಾಗಿ ವಾಲಿಬಾಲ್, ಹಗ್ಗ ಜಗ್ಗಾಟ, ಗೋಪುರ ಏರಿಕೆ, ಮಡಕೆ ಒಡೆಯುವ ಸ್ಪರ್ಧೆ, ಓಟ ಹಾಗೂ ಮಹಿಳೆಯರಿಗಾಗಿ ಹಗ್ಗ ಜಗ್ಗಾಟ, ತ್ರೋಬಾಲ್, ಓಟ, ಮಡಕೆ ಒಡೆಯುವ ಸ್ಪರ್ಧೆ, ಹಾಳೆಯಲ್ಲಿ ಎಳೆಯುವುದು ಮತ್ತು ಮಕ್ಕಳಿಗಾಗಿ ಸಂಗೀತ ಕುರ್ಚಿ, ಓಟ, ಮಡಕೆ ಒಡೆಯುವ ಸ್ಪರ್ಧೆ, ಲಿಂಬೆ ಚಮಚ, ನಿಧಿ ಶೋಧನೆ ಹಾಗೂ ಇತರ ಆಟೋಟ ಸ್ಪರ್ಧೆಗಳು ನಡೆಯಲಿದೆ.
ವಿ.ಸೂಚನೆ: ವಾಲಿಬಾಲ್ ಪಂದ್ಯಾಟದಲ್ಲಿ ರಾಷ್ಟ್ರೀಯ ರಾಜ್ಯಮಟ್ಟದಲ್ಲಿ ಆಡಿದ ಕ್ರೀಡಾಪಟುಗಳಿಗೆ ಅವಕಾಶವಿಲ್ಲ.
ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಇದ್ದು ಮಧ್ಯಾಹ್ನ 2 ಗಂಟೆಗೆ ಕಂಬಳ ಕ್ಷೇತ್ರದಲ್ಲಿ ಸಾಧನೆಗೈದ ಮಿಂಚಿನ ಓಟಗಾರ “ಪದವು ದೂಜ” ಕೋಣಕ್ಕೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.





