
ಕಾಂತಾರ ಚಿತ್ರ ಖ್ಯಾತಿಯ ನಟಿ ರುಕ್ಮಿಣಿ ವಸಂತ್ ತನ್ನ ಹೆಸರಿನಲ್ಲಿ ನಕಲಿ ಕರೆ ಹಾಗೂ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದು ಜೊತೆಗೆ ನನ್ನ ಹೆಸರಿನಲ್ಲಿ ನಕಲಿ ಕರೆ ಮತ್ತು ಮಸೇಜ್ಗ ಗೆ ಉತ್ತರಿಸಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಕರೆ ಮಾಡುತ್ತಿರುವ ಸಂಖ್ಯೆಯನ್ನೂ ಬಹಿರಂಗವಾಗಿ ಪೋಸ್ಟ್ ಮಾಡಿರುವ ರುಕ್ಮಿಣಿ, ನನ್ನ ಹೆಸರಿನಲ್ಲಿ 9445893273 ಸಂಖ್ಯೆಯಿಂದ ಇತರರಿಗೆ ಕರೆ ಮತ್ತು ಮೆಸೇಜ್ ಮಾಡಲಾಗುತ್ತಿದೆ. ಈ ಮೊಬೈಲ್ ಸಂಖ್ಯೆಯಿಂದ ಬರುವ ಕರೆ ಅಥವಾ ಸಂದೇಶಕ್ಕೆ ಪ್ರತಿಕ್ರಿಯೆ ನೀಡಬೇಡಿ. ಏನೇ ವಿಷಯವಿದ್ದರೂ ನನ್ನದೊಂದಿಗೆ ಮಾತಾಡಿ, ಮೋಸ ಹೋಗಬೇಡಿ. ನನ್ನ ಹೆಸರಿನಲ್ಲಿ ಕರೆ ಮತ್ತು ಸಂದೇಶ ಕಳುಹಿಸುವವರು ಸೈಬರ್ ಅಪರಾಧಿಗಳು, ಅವರಿಗೆ ಕಂಡಿತಾ ಶಿಕ್ಷೆ ಇದ್ದೇ ಇರುತ್ತದೆ. ಅವರ ವಿರುದ್ಧ ಸೂಕ್ತ ಕ್ರಮ ತಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.







