27.3 C
Udupi
Sunday, August 31, 2025
spot_img
spot_img
HomeBlogನನ್ನ ಹೃದಯ ಬೆಂಗಳೂರಿಗಾಗಿ… ನನ್ನ ಆತ್ಮ ಬೆಂಗಳೂರಿಗಾಗಿ…: ಐಪಿಎಲ್‌ ಟ್ರೋಫಿ ಗೆದ್ದ ಬಳಿಕ ವಿರಾಟ್ ಕೊಹ್ಲಿ...

ನನ್ನ ಹೃದಯ ಬೆಂಗಳೂರಿಗಾಗಿ… ನನ್ನ ಆತ್ಮ ಬೆಂಗಳೂರಿಗಾಗಿ…: ಐಪಿಎಲ್‌ ಟ್ರೋಫಿ ಗೆದ್ದ ಬಳಿಕ ವಿರಾಟ್ ಕೊಹ್ಲಿ ಭಾವುಕ ಮಾತು

ಅಹಮದಾಬಾದ್‌: ಮಂಗಳವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ಫೈನಲ್‌ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡವನ್ನು 6 ರನ್ಗಳಿಂದ ಮಣಿಸಿದ ಆರ್ಸಿಬಿ ಚೊಚ್ಚಲ ಐಪಿಎಲ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡು ಒಂದು ಬಾರಿಯಾದರೂ ಕಪ್‌ ಗೆಲ್ಲಬೇಕೆಂಬ ಕೋಟ್ಯಾಂತರ ಅಭಿಮಾನಿಗಳ 18 ವರ್ಷಗಳ ಕನಸು ನನಸಾಗಿದೆ. ಪಂದ್ಯದ ಬಳಿಕ ಚುಟುಕು ಸಂದರ್ಶನವೊಂದರಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ನನ್ನ ಹೃದಯ ಬೆಂಗಳೂರಿಗಾಗಿ… ನನ್ನ ಆತ್ಮ ಬೆಂಗಳೂರಿಗಾಗಿ… ನಾನು ಐಪಿಎಲ್‌ ಆಡುವ ಕೊನೇ ದಿನದವರೆಗೂ ಇದೇ ತಂಡಕ್ಕಾಗಿ ಆಡುತ್ತೇನೆ…. ನಾನು ಈ ರಾತ್ರಿ ಮಗುವಿನಂತೆ ಮಲಗುತ್ತೇನೆ ಎಂದು ಭಾವುಕರಾಗಿ ಮಾತನಾಡಿದ್ದಾರೆ.

ಮುಂದುವರೆದು… ನಾನು ಪ್ರಭಾವಿ ಆಟಗಾರನಾಗಿ ಆಡಲು ಬಯಸುವುದಿಲ್ಲ, ನಾನು ಫೀಲ್ಡಿಂಗ್ ಮಾಡಿ ಪ್ರಭಾವ ಬೀರಲು ಬಯಸುತ್ತೇನೆ ಎಂದರಲ್ಲದೇ, ಈ ಗೆಲುವು ತಂಡಕ್ಕೆ ಎಷ್ಟು ಮುಖ್ಯವೋ ಅಭಿಮಾನಿಗಳಿಗೂ ಅಷ್ಟೇ ಮುಖ್ಯವಾಗಿತ್ತು. 18 ವರ್ಷಗಳು ಕಳೆದಿವೆ. ಈ ಬಾರಿ ನಾನು ನನ್ನ ಯೌವನವನ್ನು ಮರೆತು ನನ್ನ ಅತ್ಯುನ್ನತೆಯ ಆಟವನ್ನು ನೀಡಿದ್ದೇನೆ. ನನ್ನಲ್ಲಿರುವ ಎಲ್ಲವನ್ನೂ ನಾನು ಅದಕ್ಕೆ ನೀಡಿದ್ದೇನೆ. ಈ ದಿನ ಬರುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಕೊನೆಯ ಚೆಂಡು ಎಸೆದ ತಕ್ಷಣ ಭಾವುಕನಾಗಿದ್ದೆ. ಈ ಫ್ರಾಂಚೈಸಿಗಾಗಿ ಅವರು (ಎಬಿ ಡಿವಿಲಿಯರ್ಸ್) ತುಂಬಾ ಮಾಡಿದ್ದಾರೆ ಎಂದು ಹೇಳಿದರು.

ಈ ಗೆಲುವು ಆರ್ಸಿಬಿಗೆ ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಕೆಟ್ಟ ಆರಂಭವನ್ನು ಪಡೆಯಿತು. ಆರಂಭಿಕ ಫಿಲ್ ಸಾಲ್ಟ್ ಬಹುಬೇಗನೇ ಔಟಾದ ಬಳಿಕ ಮಾಯಾಂಕ್ ಅಗರ್ವಾಲ್, ನಾಯಕ ರಜತ್ ಪಾಟಿದಾರ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್‌ರಂತಹ ಆಟಗಾರರು ಉತ್ತಮ ಆರಂಭವನ್ನು ಪಡೆದರಾದರೂ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾದರು.

ವಿರಾಟ್ ಹೆಚ್ಚು ಹೊತ್ತು ಮೈದಾನದಲ್ಲಿ ನಿಂತರಾದರೂ 35 ಎಸೆತಗಳಲ್ಲಿ ಕೇವಲ 43 ರನ್ ಗಳಿಸಲಷ್ಟೇ ಶಕ್ತರಾದರು. ಇಲ್ಲಿಂದ ಆರ್ಸಿಬಿ ಇನ್ನಿಂಗ್ಸ್ ಚೇತರಿಸಿಕೊಳ್ಳುವುದು ಕಷ್ಟ ಎಂದು ತೋರುತ್ತಿದ್ದು ಈ ಸಮಯದಲ್ಲಿ ಕಣಕ್ಕಿಳಿದ ಜಿತೇಶ್ ಶರ್ಮಾ ತಮ್ಮ ಹೊಡಿಬಡಿ ಆಟದ ಮೂಲಕ ಕೇವಲ 10 ಎಸೆತಗಳಲ್ಲಿ 24 ರನ್ ಗಳಿಸಿದರು. ಇಡೀ ಸೀಸನ್ ವಿಫಲರಾಗಿದ್ದ ಲಿವಿಂಗ್‌ಸ್ಟೋನ್ ಕೂಡ 25 ರನ್ಗಳ ಅಮೂಲ್ಯ ಇನ್ನಿಂಗ್ಸ್ ಆಡಿದರು.

10 ನೇ ಓವರ್‌ನಲ್ಲಿ ರೊಮಾರಿಯೊ ಶೆಫರ್ಡ್ ತನ್ನ ನಾಲ್ಕನೇ ಎಸೆತದಲ್ಲಿ ಶ್ರೇಯಸ್ ಅಯ್ಯರ್ ಅವರ ವಿಕೆಟ್ ಪಡೆದ ಬಳಿಕ ಆರ್ಸಿಬಿಯ ಗೆಲುವು ಖಚಿತವಾಯಿತು. ಇಲ್ಲಿಂದ ಅದ್ಭುತ ಪುನರಾಗಮನ ಮಾಡಿ, 13 ನೇ ಓವರ್‌ನಲ್ಲಿ ಜೋಶ್ ಇಂಗ್ಲಿಸ್ ಅವರನ್ನು ಸಹ ಪೆವಿಲಿಯನ್ಗಟ್ಟುವಲ್ಲಿ ಯಶಸ್ವಿಯಾಯಿತು. ಕ್ರೀಸ್ನಲ್ಲಿರುವವರೆಗೂ ಆರ್ಸಿಬಿಗೆ ಸೋಲಿನ ಭಯ ಹುಟ್ಟಿಸಿದ್ದ ಜೋಶ್ ಇಂಗ್ಲಿಸ್ (39) ಅವರ ವಿಕೆಟ್ ಅನ್ನು ಕೃನಾಲ್ ಪಾಂಡ್ಯ ಪಡೆದರು.

17 ನೇ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ ವಧೇರಾ ಮತ್ತು ಸ್ಟೊಯಿನಿಸ್‌ರ ವಿಕೆಟ್‌ಗಳನ್ನು ಪಡೆಯುವ ಮೂಲಕ ಪಂಜಾಬ್‌ನ ಸೋಲಿಗೆ ಮುದ್ರೆ ಹಾಕಿದರು. ಕೊನೆಯ ಓವರ್‌ನಲ್ಲಿ ಗೆಲ್ಲಲು 29 ರನ್‌ಗಳು ಬೇಕಾಗಿದ್ದು ಸ್ಟ್ರೈಕ್ನಲ್ಲಿದ್ದ ಶಶಾಂಕ್ ಸಿಂಗ್ (ಔಟಾಗದೆ 60) 3 ಸಿಕ್ಸರ್‌ ಮತ್ತು 1 ಬೌಂಡರಿ ಬಾರಿಸುವ ಮೂಲಕ ಬಿರುಗಾಳಿಯ ಅರ್ಧಶತಕ ಗಳಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲರಾದರು.

ಕೊನೆಗೂ ಆರ್ಸಿಬಿ ಅಭಿಮಾನಿಗಳ 17 ವರ್ಷಗಳ ಕನಸು ನನಸಾಗಿದ್ದು ಆರ್‌ಸಿಬಿಯ ಗೆಲುವು ಕೋಟ್ಯಂತರ ಅಭಿಮಾನಿಗಳ ಹರ್ಷೋದ್ಗಾರಕ್ಕೆ ಕಾರಣವಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page