
ನವದೆಹಲಿ: ದೆಹಲಿ ಕೆಂಪುಕೋಟೆ ಬಳಿಯ ಮೆಟ್ರೋ ನಿಲ್ದಾಣ ಸಮೀಪ ಸಂಭವಿಸಿದ ಭಾರಿ ಸ್ಫೋಟಕ್ಕೆ ಸಂಬಂಧಿಸಿದಂತೆ ಲಕ್ನೋ ಮೂಲದ ಮಹಿಳಾ ವೈದ್ಯೆ ಡಾ. ಶಾಹೀನ್ ಅರೆಸ್ಟ್ ಆಗಿದ್ದು ಮಗಳ ಕೃತ್ಯದ ಬಗ್ಗೆ ತಂದೆ ಸೈಯದ್ ಅಹ್ಮದ್ ಅನ್ಸಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಮಗಳ ಕೃತ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸೈಯದ್ ನನಗೆ 3 ಮಕ್ಕಳು. ಹಿರಿಯ ಪುತ್ರ ಶೊಯೇಬ್ ಜೊತೆ ಈಗ ವಾಸವಾಗಿದ್ದೇನೆ. ಎರಡನೇಯವಳು ಶಾಹೀನ್. ಮೂರನೇಯವನು ಪರ್ವೇಜ್ ಅನ್ಸಾರಿ. ಶಾಹೀನ್‌ಗೆ ಮಹಾರಾಷ್ಟ್ರದ ವ್ಯಕ್ತಿಯ ಜೊತೆ ಮದುವೆಯಾಗಿ ಆಕೆ ಫರೀದಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದಳು. ನನ್ನ ಮಗಳು ಇಂತಹ ಕೃತ್ಯದಲ್ಲಿ ತೊಡಗಿದ್ದಾಳೆ ಅಂತ ನಂಬೋಕಾಗ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂದು ತಿಂಗಳಿನಿಂದ ಶಾಹೀನ್ ಜೊತೆ ನಾನು ಮಾತನಾಡಿಲ್ಲ. ಪರ್ವೇಜ್ ಜೊತೆ ವಾರಕ್ಕೊಮ್ಮೆ ಮಾತಾಡ್ತೀನಿ. ನಾನು ಕೊನೆಯ ಬಾರಿಗೆ ಶಾಹೀನ್ ಜೊತೆ ಮಾತನಾಡಿದ್ದು ಸುಮಾರು ಒಂದು ತಿಂಗಳ ಹಿಂದೆ. ಆದರೆ, ಪರ್ವೇಜ್ ಜೊತೆ ಪ್ರತಿ ವಾರ ಮಾತನಾಡುತ್ತೇನೆ. ಶಾಹೀನ್ ಬಂಧನದ ಬಗ್ಗೆ ನನಗೆ ತಿಳಿದಿರಲಿಲ್ಲ. ಇಂದು ಬೆಳಗ್ಗೆ ಪೊಲೀಸರು ಪರ್ವೇಜ್ ಮನೆ ಮೇಲೆ ದಾಳಿ ಮಾಡಿದ್ದು ಗೊತ್ತಿದೆ ಎಂದು ಸೈಯದ್ ಅಹ್ಮದ್ ಅನ್ಸಾರಿ ತಿಳಿಸಿದ್ದಾರೆ.




















































