
ಬೆಂಗಳೂರು: ಇತ್ತೀಚಿಗಷ್ಟೇ ಕೆಎಂಎಫ್ ನಂದಿನಿ ಹಾಲಿನ ದರವನ್ನು ಏರಿಕೆ ಮಾಡಿದ್ದು ಇದರ ಬೆನ್ನಲ್ಲೇ ಇದೀಗ ದೇಶಾದ್ಯಂತ ಅಮುಲ್ ಹಾಲಿನ ದರ 2 ರೂ. ಏರಿಕೆಯಾಗಿದೆ.
ಈ ದರ ಏರಿಕೆಯು ಅಮುಲ್ ಸ್ಟ್ಯಾಂಡರ್ಡ್, ಅಮುಲ್ ಬಫೆಲೋ, ಅಮುಲ್ ಗೋಲ್ಡ್, ಅಮುಲ್ ಸ್ಲಿಮ್ ಆಂಡ್ ಟ್ರಿಮ್, ಅಮುಲ್ ಚಾಯ್‌ಮಜಾ, ಅಮುಲ್ ತಾಜಾ ಹಾಗೂ ಅಮುಲ್ ಕೌಮಿಲ್ಕ್‌ಗಳಿಗೆ ಅನ್ವಯವಾಗುತ್ತದೆ.
ಅಮುಲ್ ಸ್ಟ್ಯಾಂಡರ್ಡ್ ಹಾಲು (500 ಮಿ.ಲೀ)
ಹಳೆಯ ಬೆಲೆ: 30 ರೂ.-ಹೊಸ ಬೆಲೆ: 31 ರೂ.
ಅಮುಲ್ ಬಫೆಲೋ (ಎಮ್ಮೆ ಹಾಲು) 500 ಮಿ.ಲೀ
ಹಳೆಯ ಬೆಲೆ: 36 ರೂ.-ಹೊಸ ಬೆಲೆ: 37 ರೂ.
ಅಮುಲ್ ಗೋಲ್ಡ್ ಮಿಲ್ಕ್ (500 ಮಿ.ಲೀ)
ಹಳೆಯ ಬೆಲೆ: 33 ರೂ.-ಹೊಸ ಬೆಲೆ: 34 ರೂ.
ಅಮುಲ್ ಗೋಲ್ಡ್ ಹಾಲು (1 ಲೀಟರ್)
ಹಳೆಯ ಬೆಲೆ: 65 ರೂ.-ಹೊಸ ಬೆಲೆ: 67 ರೂ.
ಅಮುಲ್ ಸ್ಲಿಮ್ ಆಂಡ್ ಟ್ರಿಮ್ ಮಿಲ್ಕ್ (500 ಮಿ.ಲೀ)
ಹಳೆಯ ಬೆಲೆ: 24 ರೂ.-ಹೊಸ ಬೆಲೆ: 25 ರೂ.
ಅಮುಲ್ ಚಾಯ್ ಮಜಾ ಹಾಲು (500 ಮಿ.ಲೀ)
ಹಳೆಯ ಬೆಲೆ: 31 ರೂ.-ಹೊಸ ಬೆಲೆ: 32 ರೂ.
ಅಮುಲ್ ತಾಜಾ ಹಾಲು (500 ಮಿ.ಲೀ)
ಹಳೆಯ ಬೆಲೆ: 27 ರೂ.-ಹೊಸ ಬೆಲೆ: 28 ರೂ.
ಅಮುಲ್ ತಾಜಾ ಹಾಲು (1 ಲೀಟರ್)
ಹಳೆಯ ಬೆಲೆ: 53 ರೂ.-ಹೊಸ ಬೆಲೆ: 55 ರೂ





