
ಬೆಂಗಳೂರು: ಬೆಂಗಳೂರಿಗರು ಕೆಎಂಎಫ್ ಬಿಡುಗಡೆ ಮಾಡಿರುವ ನಂದಿನಿ ಬ್ರಾಂಡ್ ದೋಸೆ ಇಡ್ಲಿ ಹಿಟ್ಟಿಗೆ ಫಿದಾ ಆಗಿದ್ದು ಮೂರೇ ದಿನದಲ್ಲಿ ದಾಖಲೆಯ ಮಾರಾಟ ಆಗಿದೆ.
ಕಳೆದ ಎರಡು ಮೂರು ದಿನದಲ್ಲಿ 2.250 ಮೆಟ್ರಿಕ್ ಟನ್ ಇಡ್ಲಿ, ದೋಸೆ ಹಿಟ್ಟು ಸೇಲ್ ಆಗಿದ್ದು 5% ವೇ ಪ್ರೋಟೀನ್ ಇರೋದ್ರಿಂದ ಜನ ಖುಷಿಯಿಂದ ಮತ್ತೆ ಮತ್ತೆ ಖರೀದಿಸುತ್ತಿದ್ದಾರೆ.
ಈಗ ಇಡ್ಲಿ ಹಿಟ್ಟು ವಿತರಣೆಗೆ 5-6 ವಾಹನಗಳಿದ್ದು ಶೀಘ್ರದಲ್ಲಿಯೇ 18 ವಾಹನ ಖರೀದಿಗೆ ಕೆಎಂಎಫ್ ಚಿಂತನೆ ನಡೆಸಿದ್ದು ಜನರ ಬೇಡಿಕೆಗೆ ಅನುಗುಣವಾಗಿ ಪೂರೈಕೆಗೂ ಚಿಂತನೆ ನಡೆಸಲಾಗಿದೆ.