
ನವದೆಹಲಿ : ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಧೈರ್ಯ ತೋರಿ, ಅಮೆರಿಕಾದ ಸರಕುಗಳ ಮೇಲೆ 75% ಸುಂಕ ವಿಧಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲು ಹಾಕಿದ್ದಾರೆ.
‘ಪ್ರಧಾನಿಯವರು ಧೈರ್ಯ ತೋರಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಇಡೀ ದೇಶ ನಿಮ್ಮ ಬೆನ್ನಿಗೆ ನಿಂತಿದೆ. ಭಾರತದಿಂದ ರಫ್ತಿನ ಮೇಲೆ ಅಮೆರಿಕ ಶೇಕಡ 50ರಷ್ಟು ಸುಂಕ ವಿಧಿಸಿದ್ದು ದೇಶವು ಅದನ್ನು ಭರಿಸಲು ಸಿದ್ಧವಾಗಿದೆ. ನೀವೂ ಕೂಡ ಅಮೇರಿಕಾದಿಂದ ಬರುವ ಆಮದಿನ ಮೇಲೆ ಶೇಕಡ 75 ರಷ್ಟು ಸುಂಕ ವಿಧಿಸಿ. ನಂತರ ಟ್ರಂಪ್ ತಲೆಬಾಗುತ್ತಾರೋ ಇಲ್ಲವೋ ಎಂದು ನೋಡೋಣ’ ಎಂದು ಹೇಳಿದ್ದಾರೆ.
ಇದಲ್ಲದೆ ಕೇಂದ್ರ ಸರ್ಕಾರವು ಡೊನಾಲ್ಡ್ ಟ್ರಂಪ್ ಮುಂದೆ ‘ಮೊಣಕಾಲೂರಿದೆ’ ಎಂದು ಆರೋಪಿಸಿದ ಕೇಜ್ರಿವಾಲ್ ಅಮೆರಿಕಾದ ಸುಂಕಗಳಿಗೆ ಬಲವಾಗಿ ಪ್ರತಿಕ್ರಿಯಿಸುವ ಬದಲು ಮೋದಿ ಏಕೆ ಬಾಗಿದರು ಎಂದು ಪ್ರಶ್ನಿಸಿದ್ದಾರೆ.