19.3 C
Udupi
Friday, January 23, 2026
spot_img
spot_img
HomeBlogಧರ್ಮ ಜಾಗೃತಿ ಸಮಿತಿಯ ವತಿಯಿಂದ ಸಂಸ್ಕಾರ ಪುಸ್ತಕ ವಿತರಣೆ

ಧರ್ಮ ಜಾಗೃತಿ ಸಮಿತಿಯ ವತಿಯಿಂದ ಸಂಸ್ಕಾರ ಪುಸ್ತಕ ವಿತರಣೆ

ಮೂಡುಬಿದಿರೆ : ಧರ್ಮ ಜಾಗೃತಿ ಸಮಿತಿಯ ವತಿಯಿಂದ ಶನಿವಾರದಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲ್ಲಮುಂಡ್ಕೂರು ಇಲ್ಲಿನ ನೂರು ವಿದ್ಯಾರ್ಥಿಗಳಿಗೆ ಉಚಿತವಾಗಿ ಸಂಸ್ಕಾರ ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡುವ ಕಾರ್ಯಕ್ರಮವನ್ನು ಮಾಡಲಾಯಿತು.

 ಮಕ್ಕಳಲ್ಲಿ ರಾಷ್ಟ್ರಾಭಿಮಾನ,  ನೈತಿಕ ಮೌಲ್ಯಗಳನ್ನು  ಸುಸಂಸ್ಕಾರಗಳನ್ನು  ವೃದ್ಧಿಸುವ ದೃಷ್ಟಿಯಿಂದ  ಮಹಾನ್ ಪುರುಷರ ಹಾಗೂ ದೇಶಕ್ಕಾಗಿ ಹೋರಾಡಿದ ವೀರ  ವನಿತೆಯರ  ಸಾಹಸ,  ಸ್ವಾಭಿಮಾನ, ರಾಷ್ಟ್ರ ಭಕ್ತಿ ಮತ್ತು ಆದರ್ಶ ದಿನಚರಿ ಗಳನ್ನು ಬಿಂಬಿಸುವ ವಿಷಯಗಳನ್ನು  ಒಳಗೊಂಡಿರುವ ಸಂಸ್ಕಾರ  ನೋಟು ಪುಸ್ತಕ ಗಳನ್ನು ಉಚಿತವಾಗಿ ವಿತರಿಸಲಾಯಿತು. 

   ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಕರ್ತರಾದ ಸೌ. ನಂದಿತಾ ಕಾಮತ್ ಇವರು ನೈತಿಕ ಮೌಲ್ಯಗಳ ಬಗ್ಗೆ ಹಾಗೂ ಅದನ್ನು ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬ ವಿಷಯದ ಬಗ್ಗೆ ಶಾಲೆಯ ಮಕ್ಕಳಿಗೆ ಮಾಹಿತಿಯನ್ನು ನೀಡಿದರು.

 ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿಯವರು, ಶಾಲಾ ಶಿಕ್ಷಕಿಯರು ಹಾಗೂ  ಹಾಗೂ ಸಂಸ್ಥೆಯ ಕಾರ್ಯಕರ್ತರಾದ ಕುಮಾರಿ ವಿಜಯ ಉಪಸ್ಥಿತರಿದ್ದರು.
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page