
ಧರ್ಮಸ್ಥಳ: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು 11ನೇ ಸ್ಥಳದಲ್ಲಿ ಕಳೇಬರಕ್ಕಾಗಿ ಎಸ್ಐಟಿ ತಂಡವು ಶೋಧ ಕಾರ್ಯ ನಡೆಸಲಿದೆ.
ಎರಡು ದಿನಗಳ ಹಿಂದಷ್ಟೇ ಜಯಂತ್ ಟಿ ಎಂಬುವರು ಧರ್ಮಸ್ಥಳ ಗ್ರಾಮದಲ್ಲಿ ಸುಮಾರು 15 ವರ್ಷಗಳ ಹಿಂದೆ ಕಾನೂನು ಪ್ರಕ್ರಿಯೆ ನಡೆಸದೆ ಮೃತ ದೇಹವನ್ನು ದಫನ್ ಮಾಡಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ಎಸ್ಐಟಿ ಕಚೇರಿಗೆ ದೂರು ನೀಡಿದ್ದರು. ಇಂದು ಅವರ ಪ್ರಕರಣ ಸ್ವೀಕರಿಸುವ ಸಾಧ್ಯತೆ ಇದೆ.
ಜಯಂತ್ ಮಾಹಿತಿ ಹಕ್ಕಿನಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಗೆ ಸಂಬಂಧಿಸಿದಂತೆ 01-01-2000 ದಿಂದ 2015ರವರೆಗೆ ಅಪರಿಚಿತ ಅಸಹಜ ಸಾವಿನ ಕುರಿತಾದ ವಿವರ ಕೇಳಿದ್ದು ಆದರೆ ಸರ್ಕಾರದ ನಿಯಮದಂತೆ 26-06-2013ರ ವರೆಗಿನ ದಾಖಲೆಗಳನ್ನು ಅವಧಿ ಮೀರಿದ ಕಡತಗಳು ಎಂದು 23-11-2023 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನಾಶ ಮಾಡಿ ವಿಲೇವಾರಿ ಮಾಡಿರುವುದರಿಂದ ಮಾಹಿತಿ ಲಭ್ಯವಿರುವುದಿಲ್ಲ. ಹೀಗಾಗಿ ಉಳಿದ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹಿಂಬರಹ ನೀಡಲಾಗಿದೆ.