
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಕಚೇರಿಗೆ ಮತ್ತೊಂದು ದೂರು ಬಂದಿದ್ದು ಅದೇನೆಂದರೆ ಕಾನೂನು ಪ್ರಕ್ರಿಯೆ ನಡೆಸದೆ ಬಾಲಕಿಯ ಮೃತ ದೇಹ ದಫನ್ ಮಾಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಜಯಂತ್.ಟಿ ದೂರು ನೀಡಿದ್ದಾರೆ.
“15 ವರ್ಷಗಳ ಹಿಂದೆ ಬಾಲಕಿಯ ಮೃತದೇಹ ಪತ್ತೆಯಾಗಿದ್ದು ಮೃತದೇಹವನ್ನು ನಾನು ನೋಡಿದ್ದೇನೆ. ಕಾನೂನು ಪ್ರಕ್ರಿಯೆ ನಡೆಸದೆ ದಫನ್ ಮಾಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಜಯಂತ್.ಟಿ ಆರೋಪಿಸಿದ್ದಾರೆ. ಆ ಘಟನೆ ಪದೇ ಪದೇ ಕಾಡುತ್ತಿತ್ತು. ಈಗ ಎಸ್ಐಟಿ ರಚನೆಯಾಗಿರುವುದರಿಂದ ಪ್ರೇರಿತನಾಗಿ ಆ ಘಟನೆಯ ಬಗ್ಗೆ ದೂರು ಕೊಡುತ್ತಿದ್ದೇನೆ. ಬಾಲಕಿ ಹೂತಿಟ್ಟ ಜಾಗ ನನಗೆ ಗೊತ್ತಿದೆ. ಎಸ್‍ಐಟಿಗೆ ತೋರಿಸಲು ಸಿದ್ಧನಿದ್ದೇನೆ. ಕೊಲೆಯೋ..? ಏನೋ ನಂಗೆ ಗೊತ್ತಿಲ್ಲ. ಬಾಲಕಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿತ್ತು” ಎಂದು ಅವರು ಹೇಳಿಕೊಂಡಿದ್ದಾರೆ.