
ಧರ್ಮಸ್ಥಳ: ಧರ್ಮಸ್ಥಳ ದಲ್ಲಿ ಹೂತು ಹಾಕಲಾಗಿದೆ ಎನ್ನಲಾಗಿರುವ ಮೃತದೇಹಗಳ ತನಿಖೆಗೆ ರಚಿಸಲ್ಪಟ್ಟಿರುವ ಎಸ್‌ಐಟಿ ಸತತ ನಾಲ್ಕನೇ ದಿನವೂ ಶೋಧ ಮುಂದುವರಿಸಿದ್ದು, ಇಂದು 6ನೇ ಗುರುತಿನಲ್ಲಿ ಮೃತದೇಹ ಅವಶೇಷ ಪತ್ತೆಯಾಗಿದೆ ಎನ್ನಲಾಗುತ್ತಿದೆ.
ದೂರುದಾರ ಗುರುತಿಸಿದ ಸ್ಥಳಗಳ ಪೈಕಿ 6ನೇ ಪಾಯಿಂಟ್ ನಲ್ಲಿ, ಎರಡು ಅಸ್ಥಿ ಪಂಜರ ಪತ್ತೆಯಾಗಿದೆ. ದೇಹದ ಪೂರ್ತಿ ಭಾಗಗಳು ಸಿಕ್ಕಿಲ್ಲ ಕೆಲವು ಭಾಗಗಳು ಮಾತ್ರ ಸಿಕ್ಕಿದ್ದು ಇನ್ನೂ ಆಳಕ್ಕೆ ತೆಗೆದು ಹುಡುಕಾಟ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ಅನಾಮಿಕ ದೂರುದಾರ ಒಟ್ಟು 13 ಸ್ಥಳಗಳನ್ನು ಗುರುತಿಸಿದ್ದು, ಇನ್ನೂ 6 ಸ್ಥಳಗಳ ಶೋಧ ಬಾಕಿ ಇದೆ.