ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರದ ಪ್ರೌಢಶಾಲಾ ಹಳೆ ವಿದ್ಯಾರ್ಥಿನಿ ತನ್ವಿರಾವ್
ಶಾಲಾ ವತಿಯಿಂದ ಅಭಿನಂದನೆ

ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರಲ್ಲಿ 8ನೇ ತರಗತಿಯಿಂದ 10ನೇ ತರಗತಿಯವರೆಗೆ ವ್ಯಾಸಂಗವನ್ನು ಮಾಡಿದ ಹಳೆ ವಿದ್ಯಾರ್ಥಿನಿ ತನ್ವಿ ರಾವ್ ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 594 ಅಂಕಗಳನ್ನು ಗಳಿಸಿ ರಾಜ್ಯಮಟ್ಟದಲ್ಲಿ 6ನೇ ಸ್ಥಾನವನ್ನು ಪಡೆದು ಉಡುಪಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಶಾಲೆಗೆ ಗೌರವವನ್ನು ತಂದಿರುತ್ತಾರೆ.
ಇವರನ್ನು ಶಾಲಾ ಅಧ್ಯಕ್ಷರಾದ ಶ್ರೀಯುತ ಡಾ. ಪ್ರಶಾಂತ್ ಹೆಗ್ಡೆ, ಆಡಳಿತ ಮಂಡಳಿಯ ಸದಸ್ಯರು, ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್.ಕಾಮತ್, ಶಿಕ್ಷಕ ವೃಂದ ಅಭಿನಂದಿಸಿ ,ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿರುತ್ತಾರೆ.



