“ದೇಶ ಕಾಯೋ ಯೋಧನಿಗೆ ವೀರವಂದನೆ & ಬೃಹತ್ ವಾಹನ ಜಾಥಾ”
“ಶ್ರೀಕಾಂತ್ ಶೆಟ್ಟಿ ,ಕಾರ್ಕಳ” ದೇಶಭಕ್ತಿಯ ಮಾತು

ಕಾರ್ಕಳದ ದೇಶ ಭಕ್ತರ ವೇದಿಕೆ ವತಿಯಿಂದ ಡಿಸೆಂಬರ್ 14ರಂದು ವಿಜೇತ ವಿಶೇಷ ಶಾಲಾ ಕ್ರೀಡಾಂಗಣದಲ್ಲಿ, ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪ್ರವೀಣ್ ಕುಮಾರ್ ಶೆಟ್ಟಿ ಅವರಿಗೆ ಭವ್ಯ ಬೃಹತ್ ವಾಹನ ಜಾಥಾ ಹಾಗೂ ವೀರವಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಂಜೆ 4 ಗಂಟೆಗೆ ಬೆಳ್ಮಣ್ ಪೇಟೆಯಿಂದ ಕಾರ್ಕಳ ಅಯ್ಯಪ್ಪ ನಗರದವರೆಗೆ ಬೃಹತ್ ವಾಹನ ಜಾಥಾ ನಡೆಯಲಿದ್ದು, ನಂತರ ಸಂಜೆ 5.30ಕ್ಕೆ ದೇಶ ಕಾಯುವ ಯೋಧನಿಗೆ ವೀರ ವಂದನೆ ಸಭೆ ನಡೆಯಲಿದೆ.ಶ್ರೀಕಾಂತ್ ಶೆಟ್ಟಿ ಕಾರ್ಕಳ ಪ್ರಮುಖ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 6:30ರಿಂದ ತುಳು ನಾಟಕ ರಂಗದಲ್ಲಿ ಅದ್ಭುತ ಯಶಸ್ವಿಗಳಿಸಿದ ನಾಟಕ ‘ಶಿವದೂತೆ ಗುಳಿಗೆ’ ನಡೆಯಲಿದೆ. ದೇಶ ಭಕ್ತರ ವೇದಿಕೆ ವತಿಯಿಂದ, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.





